alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳಿಯರನ್ನು ಹಿಡಿಯಲು ನೆರವಾಯ್ತು ಸೆಲ್ಫಿ..!

theft1334ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ಹಲವರು ದುರಂತ ಸಾವನ್ನಪ್ಪಿರುವ ವರದಿಗಳೇ ಕೇಳಿ ಬರುತ್ತಿದ್ದ ಮಧ್ಯೆ ಅನಿವಾಸಿ ಭಾರತೀಯ ಮಹಿಳೆಯೊಬ್ಬರು ರೈಲಿನಲ್ಲಿ ತೆಗೆದುಕೊಂಡಿದ್ದ ಸೆಲ್ಫಿ ಆರು ಮಂದಿ ಕಳ್ಳಿಯರನ್ನು ಹಿಡಿಯಲು ಸಹಾಯಕವಾಗಿರುವ ಘಟನೆ ನಡೆದಿದೆ.

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ನೀಲಂ ಕುಮಾರಿ ಎಂಬ ಸಾಫ್ಟ್ ವೇರ್ ಇಂಜಿನಿಯರ್ ತಮ್ಮ ಪತಿಯೊಂದಿಗೆ ಡಿಸೆಂಬರ್ 9 ರಂದು ದೆಹಲಿಯ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರ ಬ್ಯಾಗ್ ನ್ನು ಅಪಹರಿಸಲಾಗಿತ್ತು. ಇದರಲ್ಲಿ ಸುಮಾರು 22 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದವೆಂದು ಹೇಳಲಾಗಿದ್ದು, ನೀಲಂ ಕುಮಾರಿ ಈ ಸಂಬಂಧ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದರು.

ಅಂದು ಮೆಟ್ರೋ ರೈಲು ಏರಿದ ಸಂದರ್ಭದಲ್ಲಿ ನೀಲಂ ಕುಮಾರಿ ಸೆಲ್ಫಿ ತೆಗೆದುಕೊಂಡಿದ್ದು, ಅದರಲ್ಲಿ ಈ ಹಿಂದೆ ಹಲವು ಕಳವು ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬಳು ಕಂಡು ಬಂದಿದ್ದಳು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ತಮ್ಮ ತಂಡವೇ ಕಳ್ಳತನ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆಕೆ ನೀಡಿದ ಸುಳಿವಿನ ಮೇರೆಗೆ ಕಳ್ಳತನದಲ್ಲಿ ಪಾಲ್ಗೊಂಡಿದ್ದ ಇನ್ನೂ ಐವರು ಮಹಿಳೆಯರನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರುಗಳಿಂದ 22 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...