alex Certify
ಕನ್ನಡ ದುನಿಯಾ       Mobile App
       

Kannada Duniya

ಆತಂಕಕಾರಿಯಾಗಿವೆ ಭಾರತದಲ್ಲಿನ ಸೆಲ್ಫಿ ದುರಂತಗಳು

ಕೈಯಲ್ಲೊಂದು ಫೋನ್ ಇದ್ದರೆ ಸಾಕು, ಕಂಡ ಕಂಡಲ್ಲೆಲ್ಲಾ ಸೆಲ್ಫಿ ತೆಗೆದುಕೊಳ್ಳುವುದು ಈಗಿನ ಟ್ರೆಂಡ್. ಎಲ್ಲರಿಗಿಂತ ವಿಭಿನ್ನವಾಗಿ ಸೆಲ್ಫಿ ತೆಗೆದುಕೊಳ್ಳಬೇಕು, ಸಾಮಾಜಿಕ ಜಾಲತಾಣಕ್ಕೆ ಹಾಕಿದ ವೇಳೆ ಅದನ್ನು ಹೆಚ್ಚಿನ ಜನ ಲೈಕ್ ಮಾಡಬೇಕು ಎಂಬ ಕಾರಣದಿಂದ ಡಿಫರೆಂಟ್ ಸೆಲ್ಫಿ ತೆಗೆದುಕೊಳ್ಳಲು ಅನೇಕರು ಪ್ರಯತ್ನಿಸುತ್ತಾರೆ.

ಹೀಗೆ ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ದುರಂತ ನಡೆದು ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಿಶ್ವದಲ್ಲಿ ನಡೆದ ಸೆಲ್ಫಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಪೈಕಿ ಭಾರತದಲ್ಲಿಯೇ ಅತಿ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧ್ಯಯನವೊಂದು ವರದಿ ಮಾಡಿದೆ.

ಸೆಲ್ಫಿ ದುರಂತಗಳನ್ನು ತಡೆಗಟ್ಟಲು ಈಗ ಅಪಾಯಕಾರಿ ಸ್ಥಳಗಳಲ್ಲಿ ಇದು ಸೆಲ್ಫಿ ನಿಷೇಧಿತ ಪ್ರದೇಶವೆಂದು ಬೋರ್ಡ್ ಹಾಕಲಾಗುತ್ತಿದೆ. ಆದರೂ ಇದನ್ನು ಲೆಕ್ಕಿಸದೆ ಹಲವರು, ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಪಾಯದ ಅರಿವಿದ್ದರೂ ಸೆಲ್ಫಿ ಕ್ರೇಜ್ ಕಡಿಮೆಯಾಗದಿರುವುದು ಮಾತ್ರ ದುರಂತದ ಸಂಗತಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...