alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ಹುಚ್ಚಿಗೆ ಕೊಚ್ಚಿ ಹೋದ ಬಾಲಕರು

rewa2

ದಿನ ಕಳೆದಂತೆ ಸೆಲ್ಫಿ ಹುಚ್ಚಿಗೆ ಬಲಿಯಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗ್ತಿದೆ. ಸೆಲ್ಫಿ ತೆಗೆಯಲು ಹೋಗಿ ಮತ್ತೆ ಐದು ಬಾಲಕರು ಬಲಿಯಾಗಿದ್ದಾರೆ. ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.

ತಮಸ್ ನದಿಯ ಜಲಪಾತವನ್ನು ನೋಡ್ತಾ ನಿಂತಿದ್ದ ಹುಡುಗರು ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ನದಿಯ ಹರಿವು ಜಾಸ್ತಿಯಾಗಿದೆ. ನೋಡ ನೋಡ್ತಿದ್ದಂತೆ ಬಾಲಕರು ಜಲಪಾತದ ಆರ್ಭಟಕ್ಕೆ ಕೊಚ್ಚಿ ಹೋಗಿದ್ದಾರೆ. ಐವರಲ್ಲಿ ಒಬ್ಬನ ಶವ ಸಿಕ್ಕಿದೆ. ಉಳಿದವರಿಗಾಗಿ ಹುಡುಕಾಟ ಮುಂದುವರೆದಿದೆ.

ಎಲ್ಲ ಹುಡುಗರು 15-16 ವರ್ಷದವರೆಂದು ಹೇಳಲಾಗಿದೆ. ಒಬ್ಬನ ಗುರುತು ಪತ್ತೆಯಾಗಿದ್ದು, ನದಿಯಲ್ಲಿ ಬಿದ್ದ ನಾಲ್ಕು ಮಂದಿ ಬಾಲಕರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಜಲಪಾತ ಧುಮ್ಮಿಕ್ಕಿ ಹರಿಯುತ್ತಿರುವುದರಿಂದ ಮಂಜು ಆವರಿಸಿದ್ದು, ಶವಗಳ ಹುಡುಕಾಟ ಕಷ್ಟವಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...