alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ತೆಗೆದುಕೊಳ್ಳೋದ್ರಲ್ಲಿ ಯುವತಿ ಮೈ ಮರೆತಾಗ….

Representative Image (Courtesy Images Bazaar)ಲೂಧಿಯಾನಾದ ಈ ಯುವತಿ ಪಾಲಿಗೆ ಸೆಲ್ಫಿ ಕ್ರೇಜ್ ಬಲು ದುಬಾರಿಯಾಗಿ ಪರಿಣಮಿಸಿದೆ. ಸೆಲ್ಫಿ ಕ್ಲಿಕ್ಕಿಸುವ ಭರದಲ್ಲಿ ಒಂದು ಕ್ಷಣ ಮೈ ಮರೆತಿದ್ದಕ್ಕೆ ಭಾರೀ ಬೆಲೆಯನ್ನೇ ತೆರಬೇಕಾಗಿ ಬಂದಿದೆ.

ಲೂಧಿಯಾನದ ಚಂಢೀಘಡ ರಸ್ತೆಯಲ್ಲಿರುವ ಮೋಹಿನಿ ರೆಸಾರ್ಟ್ ನಲ್ಲಿ ವಿವಾಹ ಸಮಾರಂಭ ಏರ್ಪಡಿಸಲಾಗಿದ್ದು, ಸೋಮವಾರ ರಾತ್ರಿ ವಧುವಿನ ಸಹೋದರಿ ನೀಲಂ ಎಂಬಾಕೆ ಅಕ್ಕನ ಪಕ್ಕದಲ್ಲಿ ಕುಳಿತುಕೊಂಡು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮಗ್ನಳಾಗಿದ್ದಾಳೆ.

ಇದೇ ಸಂದರ್ಭ ಸಾಧಿಸಿದ ನೆಂಟರ ಸೋಗಿನಲ್ಲಿ ಆಗಮಿಸಿದ್ದ ಬಾಲಕನೊಬ್ಬ ಆಕೆಯ ಪಕ್ಕದಲ್ಲಿದ್ದ ಬ್ಯಾಗ್ ಎಗರಿಸಿದ್ದಾನೆ. ಇದರಲ್ಲಿ 1,500 ರೂ. ನಗದು ಹಾಗೂ ಸುಮಾರು 8 ಲಕ್ಷ ರೂ. ಬೆಲೆ ಬಾಳುವ ಆಭರಣಗಳಿತ್ತೆಂದು ಹೇಳಲಾಗಿದೆ. ಈಗ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ತಂಡದೊಂದಿಗೆ ಆಗಮಿಸಿದ್ದ ಬಾಲಕ, ಈ ಕೃತ್ಯವೆಸಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸಿಸಿ ಟಿವಿ ದೃಶ್ಯಾವಳಿ ಆಧಾರದ ಮೇಲೆ ಪೊಲೀಸರು ಕಳ್ಳರ ತಂಡವನ್ನು ಪತ್ತೆ ಮಾಡಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...