alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ಅಧಿಕಾರಿ ಜೊತೆ ಸೆಲ್ಫಿ, ಜೈಲು ಪಾಲಾದ ಯುವಕ

chandra

ಈಗಂತೂ ಬಹುತೇಕ ಎಲ್ಲಾ ಯುವಕರ ಕೈಯಲ್ಲಿ ಸ್ಮಾರ್ಟ್ ಫೋನ್ ಸಾಮಾನ್ಯವಾಗಿ ಇದ್ದೇ ಇರುತ್ತವೆ. ಸ್ಮಾರ್ಟ್ ಫೋನ್ ಇರಲಿ ಪರವಾಗಿಲ್ಲ, ಆದರೆ, ಹೆಚ್ಚಿನ ಮಂದಿಗೆ ಸೆಲ್ಫಿ ಕ್ರೇಜ್ ಸಿಕ್ಕಾಪಟ್ಟೆ ಜಾಸ್ತಿಯೇ ಇರುವುದನ್ನು ನೋಡಿದ್ದೇವೆ. ಸೆಲ್ಫಿ ಕ್ರೇಜ್ ನಿಂದ ಅನೇಕರು ಸಮಸ್ಯೆ ಎದುರಿಸಿದ್ದಾರೆ.

ಹೀಗೆ ಡಿಸಿ ಯೊಬ್ಬರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ಯುವಕನೊಬ್ಬ ಸೆರೆವಾಸ ಅನುಭವಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. 18 ವರ್ಷ ವಯಸ್ಸಿನ ಫರಾದ್ ಅಹಮದ್ ಎಂಬ ಯುವಕನೊಬ್ಬ ಬುಲಂದ್ ಶಹರ್ ಜಿಲ್ಲಾಧಿಕಾರಿ ಚಂದ್ರಕಲಾ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜೈಲುವಾಸ ಅನುಭವಿಸಿದ್ದಾನೆ. ಚಂದ್ರಕಲಾ ಅವರು 2008 ರ ಬ್ಯಾಚ್ ಉತ್ತರ ಪ್ರದೇಶ ಐಎಎಸ್ ಅಧಿಕಾರಿಯಾಗಿದ್ದು, ಖಡಕ್ ಆಫೀಸರ್, ಜನಪರ ಆಡಳಿತ ನಡೆಸುವವರು ಎಂದು ಹೆಸರು ಗಳಿಸಿದ್ದಾರೆ.

2014ರಲ್ಲಿ ಕಳಪೆ ಕಾಮಗಾರಿ ಮಾಡಿದ್ದ ಗುತ್ತಿಗೆದಾರರು, ಅಧಿಕಾರಿಗಳನ್ನು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡು ಸುದ್ದಿಯಾಗಿದ್ದರು. ಸ್ನೇಹಿತರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಫರಾದ್ ಅಹಮದ್, ಚಂದ್ರಕಲಾ ಅವರನ್ನು ನೋಡಿದ್ದೇ ತೀರಾ ಹತ್ತಿರಕ್ಕೆ ಹೋಗಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಕೂಡಲೇ ಚಂದ್ರಕಲಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಫರಾದ್ ನನ್ನು ಬಂಧಿಸಲಾಗಿದೆ. ಕೋರ್ಟ್ ಆತನಿಗೆ 14 ದಿನಗಳ ನ್ಯಾಯಾಂಗ ವಶಕ್ಕೆ ಆದೇಶಿಸಿದೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನಂತೆ ಹರಿದಾಡುತ್ತಿದ್ದು, ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...