alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಯಂ ಘೋಷಿತ ದೇವಮಾನವ ಈಗ ಅಪರಾಧಿ

ಸ್ವಯಂಘೋಷಿತ ದೇವಮಾನವ ರಾಮ್‍ಪಾಲ್ ಮೇಲಿನ ಎರಡು ಕೊಲೆ ಆರೋಪಗಳೀಗ ಸಾಬೀತಾಗಿದ್ದು, ಅಕ್ಟೋಬರ್ 16 ಹಾಗೂ 17ರಂದು ಆತನಿಗೆ ಶಿಕ್ಷೆ ಜಾರಿಯಾಗಲಿದೆ. ಮಹಿಳೆ ಹಾಗೂ ಮಗುವಿನ ಕೊಲೆ ಸಂಬಂಧ ರಾಮ್‍ಪಾಲ್ ಮತ್ತು ಆತನ 27 ಬೆಂಬಲಿಗರ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ನಡೆಸಿರುವ ಹರಿಯಾಣ ನ್ಯಾಯಾಲಯ ಗುರುವಾರ ಈ ತೀರ್ಪನ್ನು ನೀಡಿದೆ.

ಹಿಸಾರ್ ಜಿಲ್ಲೆಯ ಬಾರ್ವಾಲಾದಲ್ಲಿರುವ ರಾಮ್‍ಪಾಲ್‍ಗೆ ಸೇರಿದ ಸತ್ಲೋಕ್ ಆಶ್ರಮದಲ್ಲಿ 2014 ರ ನವೆಂಬರ್ 19ರಂದು ಮಹಿಳೆ ಹಾಗೂ ಮಗುವಿನ ಶವ ಪತ್ತೆಯಾಗಿತ್ತು. ಈ ಪ್ರಕರಣದ ಮೇರೆಗೆ 12 ಎಕರೆ ವಿಸ್ತೀರ್ಣದಲ್ಲಿರುವ ಸತ್ಲೋಕ್ ಆಶ್ರಮದ ಮೇಲೆ ದಾಳಿ ಮಾಡಿದ್ದ ಪೊಲೀಸರು, ರಾಮ್‍ಪಾಲ್‍ನನ್ನು ಬಂಧಿಸಿದ್ದರು. ಆದರೆ ಈ ಸಂದರ್ಭದಲ್ಲಿ ಪೊಲೀಸರ ವಿರುದ್ಧ ರಾಮ್‍ಪಾಲ್ ತನ್ನ ಭಕ್ತರನ್ನೇ ಛೂ ಬಿಟ್ಟಿದ್ದರಿಂದ ಅಂದು ಪೊಲೀಸರ ಮೇಲೆ ಕಲ್ಲುತೂರಾಟ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಈಗ ಈ ತೀರ್ಪಿನ ಹಿನ್ನೆಲೆಯಲ್ಲಿ ಹಿಸಾರ್ ಜಿಲೆಯಲ್ಲಿ 2000 ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 15ನೇ ಶತಮಾನದ ಕವಿ ಕಬೀರ್ ವಿಚಾರಗಳ ಪ್ರಚಾರ ಮೂಲಕ ರಾಮ್‍ಪಾಲ್ ಅಪಾರ ಭಕ್ತವೃಂದವನ್ನು ಗಳಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...