alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿವರ ಆಪ್ತನಿಗೆ ಐ.ಟಿ., ಇ.ಡಿ.ಯಿಂದ ಡ್ರಿಲ್

selam-bank

ಚೆನ್ನೈ: ಸೇಲಂನ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಇಳಂಗೋವನ್ ಅವರನ್ನು, ಐ.ಟಿ. ಮತ್ತು ಇ.ಡಿ. ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಇಳಂಗೋವನ್ ತಮಿಳುನಾಡು ಲೋಕೋಪಯೋಗಿ ಸಚಿವ ಎಡಪಾಡಿ ಪಳನಿಸಾಮಿ ಅವರ ಆಪ್ತನಾಗಿದ್ದು, ಕರ್ನಾಟಕದ ಗುತ್ತಿಗೆದಾರ ಚಂದ್ರಕಾಂತ್ ರಾಮಲಿಂಗಂ ಸಂಬಂಧಿಯಾಗಿದ್ದಾರೆ.

ನವೆಂಬರ್ 8 ರ ನಂತರ ಸಹಕಾರಿ ಬ್ಯಾಂಕ್ ನ ಬೇನಾಮಿ ಖಾತೆಗಳಲ್ಲಿ ನೂರಾರು ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ.

ಹೀಗೆ ಹಣ ಜಮಾ ಮಾಡುವಲ್ಲಿ ಅಧ್ಯಕ್ಷ ಇಳಂಗೋವನ್ ಪ್ರಮುಖ ಪಾತ್ರ ವಹಿಸಿದ್ದು, ನಿನ್ನೆಯಿಂದಲೂ ದಾಳಿ ಮುಂದುವರೆದಿದೆ.

ನಿನ್ನೆ ಬ್ಯಾಂಕ್ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಿದ್ದ ಇ.ಡಿ. ಮತ್ತು ಐ.ಟಿ. ಇಲಾಖೆ ಅಧಿಕಾರಿಗಳು, ಇಂದು ಇಳಂಗೋವನ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...