alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಮಂಟಪದಲ್ಲೇ ವರ ಮಾಡ್ದ ಇಂತ ಕೆಲಸ

ಉತ್ತರ ಪ್ರದೇಶದ ಹರ್ದೊಯಿಯ ಬದೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರನೊಬ್ಬ ತನ್ನ ಮದುವೆಯಲ್ಲಿ ಮಾಡಿರುವ ಮಾನಗೇಡಿ ಕೆಲಸದಿಂದಾಗಿ ಮದುವೆಯೇ ನಿಂತುಹೋಗಿದೆ. ವರ ಕಂಠಪೂರ್ತಿ ಕುಡಿದುಕೊಂಡು ಮಂಟಪಕ್ಕೆ ಬಂದಿದ್ದೇ ಇದಕ್ಕೆ ಕಾರಣ.

ಮದುವೆ ಮಂಟಪದಲ್ಲಿ ತನ್ನ ಪಕ್ಕ ಕುಳಿತ ವರನನ್ನು ನೋಡಿ ವಧು ಗಾಬರಿ ಬಿದ್ದಿದ್ದಾಳೆ. ಸರಿಯಾಗಿ ಕುಳಿತುಕೊಳ್ಳಲೂ ತ್ರಾಣವಿಲ್ಲದಂತೆ ಆತ ಕುಡಿದಿದ್ದು, ಹೀಗಾಗಿ ವಧು ತನಗೆ ಈ ಮದುವೆ ಬಿಲ್ಕುಲ್ ಇಷ್ಟವಿಲ್ಲವೆಂದು ಹೇಳಿದ್ದಾಳೆ. ವಧುವಿನ ತಂದೆಯೂ ಮಗಳನ್ನು ಬೆಂಬಲಿಸಿದ್ದಾರೆ.

ಮದುವೆಗೆ ಬಂದಿದ್ದ ಕೆಲವರು ಇದೊಂದು ಬಾರಿ ವರನನ್ನು ಕ್ಷಮಿಸುವಂತೆ ಕೇಳಿಕೊಂಡರೂ ವಧು ತನ್ನ ನಿಲುವು ಸಡಿಲಿಸಿಲ್ಲ. ಆಗ ವಧು ಮತ್ತು ವರನ ಕಡೆಯವರಿಗೆ ಗಲಾಟೆ ನಡೆದಿದ್ದು, ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಎರಡು ಕಡೆಯವರನ್ನೂ ಸಮಾಧಾನಿಸಿ ವರನನ್ನು ಬರಿಗೈಯಲ್ಲಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...