alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಟ್ರಕ್ ಚಾಲಕನ ಈ ಕುಚೇಷ್ಟೆ ವಿಡಿಯೋ

ಗುಜರಾತ್ ನ ಗಿರ್ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಟ್ರಕ್ ಚಾಲಕನೊಬ್ಬ ಮಾಡಿರುವ ಕುಚೇಷ್ಟೆಯ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಂಹವೊಂದು ತನ್ನ ಮೂರು ಮರಿಗಳೊಂದಿಗೆ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಟ್ರಕ್ ನಲ್ಲಿ ಅವುಗಳ ಬೆನ್ನು ಹತ್ತಿದ್ದಾನೆ ಈ ಚಾಲಕ.

ಅಮ್ರೇಲಿ ಜಿಲ್ಲೆಯ ರಾಜುಲಾ ತಾಲೂಕಿನ ಪಿಪವಾವ್ ಪೋರ್ಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಸಿಂಹಗಳು ಅಡ್ಡ ಬಂದ ವೇಳೆ ಟ್ರಕ್ ಚಾಲಕ ತನ್ನ ವಾಹನದ ಮೂಲಕ ಅದರ ಬೆನ್ನತ್ತಿದ್ದರೆ ಆತನ ಪಕ್ಕದಲ್ಲಿ ಕೂತವನು ಇದೆಲ್ಲವನ್ನೂ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅರಣ್ಯಾಧಿಕಾರಿಗಳು ಕುಚೇಷ್ಟೆ ನಡೆಸಿದ ಟ್ರಕ್ ಚಾಲಕನ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ. ಆತನ ಪತ್ತೆಗಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ.

ಗಿರ್ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಆನೇಕ ಬಾರಿ ಕಾಡು ಪ್ರಾಣಿಗಳು ಜನವಸತಿ ಪ್ರದೇಶ ಹಾಗೂ ರಸ್ತೆಗಳ ಮೇಲೆ ಸಂಚರಿಸುವುದು ಕಂಡು ಬಂದಿದ್ದು, ಇಂತಹ ಕುಚೇಷ್ಟೆ ಮಾಡಿದರೆ ಅವುಗಳು ಕೆರಳುವ ಅಪಾಯವಿದೆ ಎಂದು ಅರಣ್ಯಾಧಿಕಾರಿಗಳು ಎಚ್ಚರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...