alex Certify
ಕನ್ನಡ ದುನಿಯಾ       Mobile App
       

Kannada Duniya

ಸೀ-ಪ್ಲೇನ್ ಮೂಲಕ ಸಬರಮತಿ ನದಿ ದಾಟಿದ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಅಹಮದಾಬಾದ್ ನಲ್ಲಿರುವ ಸಬರಮತಿ ನದಿಯನ್ನು ಸೀ-ಪ್ಲೇನ್ ಮೂಲಕ ದಾಟಿದ್ರು. ಮೆಹಸಾನಾ ಜಿಲ್ಲೆಯ ಧೋರೋಯಿ ಆಣೆಕಟ್ಟಿನವರೆಗೆ ಪ್ರಯಾಣ ಬೆಳೆಸಿದ ಅವರು ಅಂಬಾಜಿ ಮಾತೆಯ ದರ್ಶನ ಪಡೆದ್ರು. ಭಾರತ ಪ್ರಧಾನಿ ಮೋದಿ ಸೀ-ಪ್ಲೇನ್ ನಲ್ಲಿ ಪ್ರಯಾಣ ಬೆಳೆಸಿದ್ದು ಇದೇ ಮೊದಲು.

ಭಾರತ ಸರ್ಕಾರ ಸಣ್ಣ ಪಟ್ಟಣ ಹಾಗೂ ಗ್ರಾಮೀಣ ಇಲಾಖೆಯನ್ನು ಸಂಪರ್ಕಿಸಲು ಸೀ-ಪ್ಲೇನ್ ಯೋಜನೆ ಜಾರಿಗೆ ತರಲು ಮುಂದಾಗಿದೆ. ಈ ಯೋಜನೆಯಡಿಯಲ್ಲಿ ಸ್ಪೈಸ್ ಜೆಟ್ ಜಪಾನ್ ಜೊತೆ ಕೈ ಜೋಡಿಸಿ 10-12 ಸೀಟಿನ ಸೀ-ಪ್ಲೇನ್ ನ ಪ್ರಯೋಗ ಶುರುಮಾಡಿದೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ಇದ್ರ ಪ್ರಯೋಗ ನಡೆದಿತ್ತು.

ಮೂಲಗಳ ಪ್ರಕಾರ ಒಂದು ಸೀ-ಪ್ಲೇನ್ ಬೆಲೆ 4 ಮಿಲಿಯನ್ ಡಾಲರ್ ಎನ್ನಲಾಗ್ತಿದೆ. ಸ್ಪೈಸ್ ಜೆಟ್ ಜಪಾನ್ ನಿಂದ 100 ಸೀ ಪ್ಲೇನ್ ಖರೀದಿ ಮಾಡಲಿದೆ. ಈ ಪ್ಲೇನ್ 700 ಕೆ.ಜಿ ತೂಕ ಹೊಂದಿದೆ. 1110 ಕೆಜಿ ಸಾಮರ್ಥ್ಯವನ್ನು ಇದು ಹೊಂದಿದೆ. 2010ರಲ್ಲಿ ಪ್ರಫುಲ್ ಪಟೇಲ್ ಇದನ್ನು ಉದ್ಘಾಟಿಸಿದ್ದರು.

ಆರಂಭದಲ್ಲಿ ಭಾರತದ 32 ಕಡೆ ಇದು ಹಾರಾಟ ಶುರುಮಾಡಲಿದೆ. ಮುಂದಿನ ಹಂತದಲ್ಲಿ 80 ಸ್ಥಳಗಳಲ್ಲಿ ಯೋಜನೆ ವಿಸ್ತರಣೆಯಾಗಲಿದೆ. ಈ ಯೋಜನೆ ನಂತ್ರ ಜನರು ದೇಶದ ಮೂಲೆ ಮೂಲೆ ತಲುಪಬಹುದೆಂದು ಅಂದಾಜಿಸಲಾಗಿದೆ. ಆಸ್ಟ್ರೇಲಿಯಾ, ಮಾಲ್ಡೀವ್ಸ್ ನಲ್ಲಿ ಪ್ರವಾಸಿಗರನ್ನು ಇದ್ರಲ್ಲಿಯೇ ಕರೆದೊಯ್ಯಲಾಗುತ್ತದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...