alex Certify
ಕನ್ನಡ ದುನಿಯಾ       Mobile App
       

Kannada Duniya

ಮಳಿಗೆಗಳಲ್ಲಿ ಮಾಂಸದ ಖಾದ್ಯ ಪ್ರದರ್ಶಿಸದಂತೆ ನಿಷೇಧ

ದಕ್ಷಿಣ ದೆಹಲಿಯಲ್ಲಿ ಇನ್ಮುಂದೆ ತೆರೆದ ಮಳಿಗೆಗಳಲ್ಲಿ ಮಾಂಸಾಹಾರಗಳನ್ನು ಪ್ರದರ್ಶಿಸುವಂತಿಲ್ಲ. ನೈರ್ಮಲ್ಯ ಹಾಗೂ ಜನರ ಭಾವನೆಗಳನ್ನು ಗಮನದಲ್ಲಿರಿಸಿಕೊಂಡು ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ಇದಕ್ಕೆ ನಿಷೇಧ ಹೇರಿದೆ. ಈ ಸಂಬಂಧ ನಿಯಮ ಮತ್ತು ಷರತ್ತುಗಳ ಬಗ್ಗೆ ಚರ್ಚಿಸಲು ಜನವರಿ 3ಕ್ಕೆ ಸಭೆ ಕರೆಯಲಾಗಿದೆ.

ರೋಸ್ಟೆಡ್ ಚಿಕನ್, ಕಬಾಬ್ ಇವನ್ನೆಲ್ಲ ತೆರೆದ ಮಳಿಗೆಗಳಲ್ಲಿ ಪ್ರದರ್ಶಿಸುವುದರಿಂದ ಅವುಗಳ ಮೇಲೆ ಕೀಟಾಣುಗಳು ಕುಳಿತು, ಆರೋಗ್ಯಕ್ಕೆ ಮಾರಕವಾಗಬಹುದು. ಜೊತೆಗೆ ಇದು ಸಸ್ಯಾಹಾರಿಗಳ ಭಾವನೆಗೆ ಧಕ್ಕೆ ತರುತ್ತದೆ ಅಂತಾ ಕೌನ್ಸಿಲರ್ ಗಳಾದ ರಾಜ್ ದತ್ ಮತ್ತು ನಂದಿನಿ ಶರ್ಮಾ ವಾದಿಸಿದ್ರು.

ಮಾಂಸದ ತಿನಿಸುಗಳನ್ನು ನೇತು ಹಾಕುವುದರಿಂದ ನಾಯಿಗಳು ಕೂಡ ಆಕರ್ಷಿತವಾಗುತ್ತವೆ ಅನ್ನೋದು ಅವರ ಅಭಿಪ್ರಾಯ. ರೆಸ್ಟೋರೆಂಟ್ ಗಳು ಹಾಗೂ ಇತರ ಫುಡ್ ಪಾಯಿಂಟ್ ಗಳಲ್ಲಿ ಇನ್ನು ಮುಂದೆ ಮಾಂಸದ ಖಾದ್ಯಗಳನ್ನು ಪ್ರದರ್ಶಿಸಿದ್ದು, ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಜನವರಿ 3ರಂದು ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...