alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ಕೇಳಿದ ಮಕ್ಕಳ ಮೇಲೆ ಲಾಠಿ ಚಾರ್ಜ್

ಛತ್ತೀಸ್ಗಢದ ಬಲೋದಾ ಬಜಾರ್ ನಲ್ಲಿ ರಸ್ತೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಶಾಲಾ ಮಕ್ಕಳ ಮೇಲೆ ಲಾಠಿ ಚಾರ್ಜ್ ನಡೆದಿದೆ. ಸಿಎಂ ವಿಕಾಸ ಯಾತ್ರೆ ನಡೆಸುವ ಮಾರ್ಗದಲ್ಲಿ ಕೆಲ ಶಾಲಾ ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದರು. ಶಾಲೆಗೆ ಹೋಗಲು ಸರಿಯಾದ ರಸ್ತೆಯಿಲ್ಲವೆಂದು ಅವ್ರು ದೂರುತ್ತಿದ್ದರು. ಈ ವೇಳೆ ಸಿಟ್ಟಿಗೆದ್ದ ಎಸ್ಟಿಎಂ, ಮಕ್ಕಳ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಸ್ಡಿಎಂ ವರ್ತನೆಗೆ ಜನರು ಛೀಮಾರಿ ಹಾಕ್ತಿದ್ದಾರೆ. ಎಸ್ಡಿಎಂ ತೀರ್ಥರಾಜ್ ವಿರುದ್ಧ ತನಿಖೆಗೆ ಆಗ್ರಹಿಸಲಾಗಿದೆ. ಮಕ್ಕಳು ರಸ್ತೆ ನಿರ್ಮಾಣ ಹಾಗೂ ಅಕ್ರಮಗಳ ತೆರವಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಮೊದಲು ತೀರ್ಥರಾಜ್ ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತ್ರ ಪೊಲೀಸ್ ಎದುರಲ್ಲೆ ಮಕ್ಕಳಿಗೆ ಹೊಡೆದಿದ್ದಾರೆ.

ತೀರ್ಥರಾಜು ಇಂಥ ಕೆಲಸಕ್ಕಿಳಿದಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ತೀರ್ಥರಾಜು ವಿರುದ್ಧ ದೂರು ಕೇಳಿ ಬಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...