alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆಯಲ್ಲೇ ದುಡುಕಿನ ನಿರ್ಧಾರ ಕೈಗೊಂಡ ವಿದ್ಯಾರ್ಥಿನಿ

ತಿರುವನಂತಪುರಂ: ಶಾಲೆಯಲ್ಲಿ ಸಹೋದರಿಯ ಸಹಪಾಠಿಗಳು ಅಪಹಾಸ್ಯ ಮಾಡಿದ್ದರಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದಲ್ಲಿ ನಡೆದಿದೆ.

ಕೊಲ್ಲಂನ ಟ್ರಿನಿಟಿ ಲೈಸಿಯಮ್ ಸ್ಕೂಲ್ ನಲ್ಲಿ ಓದುತ್ತಿದ್ದ 15 ವರ್ಷದ ಗೌರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಶುಕ್ರವಾರ ಶಾಲೆಯ 3 ನೇ ಮಹಡಿಯಿಂದ ಹಾರಿದ್ದ ಗೌರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಗೌರಿಯ ಸಹೋದರಿ ತರಗತಿಯಲ್ಲಿ ಮಾತನಾಡಿದ್ದರಿಂದ ಶಿಕ್ಷಕರು ಆಕೆಯನ್ನು ಹುಡುಗರ ನಡುವೆ ಕೂರಿಸಿದ್ದಾರೆ. ಇದಕ್ಕೆ ಗೌರಿ ಆಕ್ಷೇಪಸಿ ಶಿಕ್ಷಕರ ಬಳಿ ವಾದ ಮಾಡಿದ್ದಾಳೆ. ಮತ್ತೆ ಆಕೆ ಸಹೋದರಿಯ ತರಗತಿಗೆ ಹೋಗಿ ಆಕೆಯನ್ನು ನೋಡಿದ್ದಾಳೆ.

ಶಿಕ್ಷಕರು ಸ್ಪಂದಿಸದ ಕಾರಣ ಮತ್ತು ಸಹೋದರಿಯ ಸಹಪಾಠಿಗಳು ಅಪಹಾಸ್ಯ ಮಾಡಿದ್ದರಿಂದ ಮನನೊಂದ ಗೌರಿ ಕಟ್ಟಡದಿಂದ ಹಾರಿದ್ದಾಳೆ.

ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಪೋಷಕರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಕೊಲ್ಲಂ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...