alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಅಸ್ಥಿಯಲ್ಲಿ ಸಿಕ್ತು ದಂಗಾಗುವ ವಸ್ತು

girl_died_1_1501912613

ಪತ್ನಿ ಅಂತಿಮ ಸಂಸ್ಕಾರದ ನಂತ್ರ ಅಸ್ಥಿ ಪಡೆಯಲು ಹೋದ ಪತಿ ಆಶ್ಚರ್ಯಕ್ಕೊಳಗಾಗಿದ್ದಾನೆ. ಅಸ್ಥಿ ಜೊತೆ ಆತನಿಗೆ ಸಿಕ್ಕ ವಸ್ತು ನೋಡಿ ಪತಿ ದಂಗಾಗಿದ್ದಾನೆ.

ಘಟನೆ ನಡೆದಿರುವುದು ಹರ್ಯಾಣದ ಯಮುನಾನಗರದಲ್ಲಿ. ಪೇಪರ್ ಮಿಲ್ ಕಾಲೋನಿಯ ಮಹಿಳೆಯೊಬ್ಬಳ ಸಾವಿನ ನಂತ್ರ ಅಸ್ಥಿ ತರಲು ಪತಿ ಸ್ಮಶಾನಕ್ಕೆ ಹೋಗಿದ್ದಾನೆ. ಅಲ್ಲಿ ಅಸ್ಥಿ ಜೊತೆ ಶಸ್ತ್ರಚಿಕಿತ್ಸೆಗೆ ಬಳಸುವ ಕತ್ತರಿ ಸಿಕ್ಕಿದೆ. ಖಾಸಗಿ ಆಸ್ಪತ್ರೆ ವಿರುದ್ಧ ಸಂಬಂಧಿಕರು ಆರೋಪ ಹೊರಿಸಿದ್ದಾರೆ. ಮೃತ ಮಹಿಳೆ ನಿರ್ಮಲಾ ದೇವಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತಂತೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ಅಲ್ಲಿಯೇ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಆದ್ರೂ ಹೊಟ್ಟೆ ನೋವು ಕಡಿಮೆಯಾಗದೆ ಮಹಿಳೆ ಸಾವನ್ನಪ್ಪಿದ್ದಳಂತೆ.

ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ವೇಳೆ ಕತ್ತರಿಯನ್ನು ಹೊಟ್ಟೆಯಲ್ಲಿ ಇಟ್ಟು ಹೊಲಿಗೆ ಹಾಕಿದ್ದಾರೆಂದು ಸಂಬಂಧಿಕರು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕತ್ತರಿಯನ್ನು ವಶಕ್ಕೆ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...