alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರಧ್ವಜವನ್ನು ಕಾಲಿನಲ್ಲಿ ತುಳಿದ ಶಿಕ್ಷಕಿ

kgbkbkjbk_1485447023

ದೇಶದಾದ್ಯಂತ 68ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಆದ್ರೆ ಉತ್ತರ ಪ್ರದೇಶದ ಮೊರದಾಬಾದ್ ಕಾಲೇಜು ಶಿಕ್ಷಕಿಯೊಬ್ಬಳು ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿದ್ದಾಳೆ. ಧ್ವಜವನ್ನು ಕಾಲಿನಲ್ಲಿ ತುಳಿದು ತಲೆತಗ್ಗಿಸುವ ಕೆಲಸ ಮಾಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಕೂಡ ನೆಲಕ್ಕೆ ಬಿದ್ದಿದ್ದ ತ್ರಿವರ್ಣ ಧ್ವಜವನ್ನು ಗೌರವದಿಂದ ಮೇಲಕ್ಕೆತ್ತುವ ಕೆಲಸ ಮಾಡಲಿಲ್ಲ.

ಘಟನೆ ನಡೆದಿರುವುದು ಮೊರದಾಬಾದ್ ನ ಸಂಸ್ಕೃತ ಕಾಲೇಜಿನಲ್ಲಿ. ಕಾಲೇಜಿನ ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಸಹೋದರಿಯರ ನಡುವೆ ಗಲಾಟೆ ನಡೆಯುತ್ತಿದೆ. ನಿನ್ನೆ ಧ್ವಜಾರೋಹಣದ ವೇಳೆ ವಿದ್ಯಾಲಯಕ್ಕೆ ಬಂದ ಚಾರು ಶರ್ಮಾ, ಭೂಮಿ ವಿಚಾರಕ್ಕೆ ಗಲಾಟೆ ಶುರುಮಾಡಿದ್ದಾಳೆ. ಧ್ವಜವನ್ನು ಕಾಲಿನಲ್ಲಿ ಎಳೆದಾಡಿದ್ದಾಳೆ. ಇದನ್ನು ನೋಡಿದ ಸಿಬ್ಬಂದಿ 100ಕ್ಕೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ವಿವಾದ ಬಗೆಹರಿಸುವುದರಲ್ಲಿ ನಿರತರಾಗಿದ್ದರೇ ಹೊರತು ನೆಲಕ್ಕೆ ಬಿದ್ದ ಧ್ವಜವನ್ನು ಎತ್ತಿಡಲು ಮುಂದಾಗಿಲ್ಲ. ಇಬ್ಬರು ಸಹೋದರಿಯರ ವಿರುದ್ಧ ದೂರು ದಾಖಲಾಗಿದ್ದು, ವಿಚಾರಣೆ ಶುರುವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...