alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಡಿಗೆ ಕಟ್ಟದ ಲತಾ ರಜನಿಕಾಂತ್ ಶಾಲೆಗೆ ಬೀಗ

rajini

ಚೆನ್ನೈ: ಖ್ಯಾತ ನಟ  ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರು ನಡೆಸುತ್ತಿರುವ ಆಶ್ರಮ ಶಾಲೆಯ ಬಾಡಿಗೆ ಕಟ್ಟದ ಕಾರಣ ಬೀಗ ಹಾಕಲಾಗಿದೆ.

ಕಟ್ಟಡದ ಮಾಲೀಕರು ಶಾಲೆಗೆ ಬೀಗ ಹಾಕಿದ್ದಾರೆ. ಇದಕ್ಕೆ ಆಕ್ಷೇಪಿಸಿರುವ ಶಾಲೆಯ ಆಡಳಿತ ಮಂಡಳಿ ಮಾಧ್ಯಮಗಳಿಗೆ ಸುಳ್ಳು ಹೇಳಿಕೆ ನೀಡಿದ ಕಟ್ಟಡದ ಮಾಲೀಕ ವೆಂಕಟೇಶ್ವರುಲು ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾಗಿದೆ.

ಲತಾ ರಜನಿಕಾಂತ್ ನಡೆಸುತ್ತಿರುವ ಆಶ್ರಮ ಶಾಲೆಯಲ್ಲಿ 400 ಮಕ್ಕಳು ಇದ್ದಾರೆ. ಕಟ್ಟಡದ ಮಾಲೀಕ ಬೀಗ ಹಾಕಿರುವುದರಿಂದ ಮಕ್ಕಳಿಗೆ ಬೇರೆ ಕಡೆ ವ್ಯವಸ್ಥೆ ಮಾಡಲಾಗಿದೆ.

ಕೋರ್ಟ್ ಆದೇಶದಂತೆ 2018 ರ ವೇಳೆಗೆ ಕಟ್ಟಡವನ್ನು ಖಾಲಿ ಮಾಡಬೇಕಿದ್ದು, ಅಲ್ಲಿಯವರೆಗಿನ ಬಾಡಿಗೆಯನ್ನು ಕೊಡಬೇಕಿದೆ. ಆದರೆ, ಶಾಲೆಯ ಆಡಳಿತ ಮಂಡಳಿ ಬಾಡಿಗೆ ಪಾವತಿಸಿಲ್ಲ ಎಂದು ವೆಂಕಟೇಶ್ವರುಲು ದೂರಿದ್ದಾರೆ.

ಕಟ್ಟಡದ ಮಾಲೀಕರ ಕುಟುಂಬ ಕಲಹದಿಂದ ಆಶ್ರಮ ಶಾಲೆಗೆ ತೊಂದರೆ ಕೊಡಲಾಗುತ್ತಿದೆ. ಶಾಲೆಯ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಶಾಲೆಯ ಶಿಕ್ಷಕರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...