alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಲ್ಪದರಲ್ಲೇ ತಪ್ಪಿದೆ ದೊಡ್ಡ ದುರಂತ….

rgs school busಆಂಧ್ರ ಹಾಗೂ ತೆಲಂಗಾಣದಲ್ಲಿ ಎರಡು ದಿನಗಳ ಕಾಲ ಸುರಿದಿದ್ದ ಭಾರೀ ಮಳೆಯಿಂದಾಗಿ 10 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರಲ್ಲದೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಆಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಸತತವಾಗಿ ಮಳೆಯಾಗುತ್ತಿದ್ದ ಕಾರಣ ಎರಡು ದಿನಗಳ ಕಾಲ ಶಾಲಾ- ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದ್ದರೂ ಕೆಲ ಖಾಸಗಿ ಶಾಲೆಗಳು ಕಾರ್ಯ ನಿರ್ವಹಿಸಿದ್ದು, 40 ಮಂದಿ ಪುಟ್ಟ ಮಕ್ಕಳಿದ್ದ ಶಾಲಾ ಬಸ್, ನೀರಿನಲ್ಲಿ ಸಿಲುಕಿಕೊಂಡ ವೇಳೆ ಸ್ಥಳೀಯರು ಸಕಾಲಕ್ಕೆ ನೆರವಿಗೆ ಧಾವಿಸಿದ ಪರಿಣಾಮ ದೊಡ್ಡ ದುರಂತ ತಪ್ಪಿದೆ.

ಹೈದರಾಬಾದಿನ ಕುಕ್ಕಟಪಲ್ಲಿಯ ರಾಘವೇಂದ್ರ ಕಾನ್ಸೆಪ್ಟ್ ಸ್ಕೂಲ್ ಶನಿವಾರದಂದು ಪರೀಕ್ಷೆ ಕಾರಣ ಹೇಳಿ ಸರ್ಕಾರ ರಜೆ ಘೋಷಿಸಿದ್ದರೂ ಕಾರ್ಯ ನಿರ್ವಹಿಸಿದೆ. 40 ಮಂದಿ ಪ್ರೈಮರಿ ಮಕ್ಕಳನ್ನು ಶಾಲಾ ಬಸ್ ನಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಧರಣಿ ನಗರದಲ್ಲಿ ಬಸ್ ನೀರಿನಲ್ಲಿ ಸಿಲುಕಿಕೊಂಡಿದೆ. ಬಸ್ ನ ಅರ್ಧ ಭಾಗ ನೀರಿನಲ್ಲಿ ಮುಳುಗಿದ್ದು, ಇದನ್ನು ಕಂಡ ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿದ್ದಾರೆ. ನೀರಿನ ಗುಂಡಿಯಲ್ಲಿ ಸಿಲುಕಿದ್ದ ಬಸ್ ಅನ್ನು ತಳ್ಳಿ ಸುರಕ್ಷಿತ ಸ್ಥಳ ತಲುಪಿಸಿದ್ದಾರೆ.

ಸರ್ಕಾರ ರಜೆ ಘೋಷಿಸಿದ್ದರೂ ಹಲವು ಖಾಸಗಿ ಶಾಲೆಗಳು ಕಾರ್ಯ ನಿರ್ವಹಿಸಿವೆ ಎನ್ನಲಾಗಿದ್ದು, ಒಂದು ವೇಳೆ ಮಕ್ಕಳಿಗೆ ಏನಾದರೂ ಅಪಾಯವಾಗಿದ್ದರೆ ಯಾರು ಹೊಣೆ ಎಂದು ಪೋಷಕರು ಪ್ರಶ್ನಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು, ತನಿಖೆ ನಡೆಸಿ ಸರ್ಕಾರಿ ಆದೇಶ ಉಲ್ಲಂಘಿಸಿರುವ ಶಾಲೆಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...