alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ರಕ್ಕೆ ಸ್ಪಂದಿಸಿ ನೆರವು ನೀಡಿದ ಸಚಿನ್ ತೆಂಡೂಲ್ಕರ್

sachin tendulkarರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಪಶ್ಚಿಮ ಬಂಗಾಳದ ಮಿಡ್ನಾಪುರ್ ಜಿಲ್ಲೆಯ ಶಾಲೆಯೊಂದು ಆರ್ಥಿಕ ನೆರವು ಕೋರಿ ಬರೆದಿದ್ದ ಪತ್ರಕ್ಕೆ ಸ್ಪಂದಿಸಿ ಸುಮಾರು 70 ಲಕ್ಷ ರೂ. ಗಳನ್ನು ತಮ್ಮ ಅನುದಾನದಲ್ಲಿ ಕೊಡಿಸಿದ್ದಾರೆ.

ಸ್ವರ್ಣಮಾಯಿ ಸಾಸ್ಮಲ್ ಶಿಕ್ಷಾ ನಿಕೇತನ ಶಾಲೆಯ ಕಟ್ಟಡ ಕಾಮಗಾರಿ ಆರ್ಥಿಕ ಕಾರಣಗಳಿಂದ ಕುಂಟುತ್ತಾ ಎಡವುತ್ತಾ ಸಾಗಿತ್ತು. ಸ್ಥಳೀಯ ಲೋಕಸಭಾ ಸದಸ್ಯರನ್ನು ಸಂಪರ್ಕಿಸಿ ಅನುದಾನ ನೀಡುವಂತೆ ಕೋರಲಾಗಿತ್ತಾದರೂ ಅವರು ಅದಕ್ಕೆ ಸ್ಪಂದಿಸಲಿಲ್ಲವೆನ್ನಲಾಗಿದೆ.

ಕೊನೆಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನೆರವು ಕೋರಿ ಸಚಿನ್ ತೆಂಡೂಲ್ಕರ್ ಅವರಿಗೆ ಪತ್ರ ಬರೆದಿದ್ದಾರೆ. ಆರು ತಿಂಗಳಾದರೂ ಯಾವುದೇ ಉತ್ತರ ಬಾರದ ಕಾರಣ ನೆರವಿನ ಆಸೆ ಕೈ ಬಿಟ್ಟಿದ್ದರು. ಆಶ್ಚರ್ಯವೆನ್ನುವಂತೆ ಇತ್ತೀಚೆಗೆ ಸಚಿನ್ ತೆಂಡೂಲ್ಕರ್ ಅವರಿಂದ ಪತ್ರ ಬಂದಿದ್ದು, ತಮ್ಮ ಪ್ರದೇಶಾಭಿವೃದ್ದಿ ನಿಧಿಯಿಂದ ಶಾಲೆಯ ಕಟ್ಟಡ ಕಾಮಗಾರಿಗೆ 70 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿಸಿರುವುದಾಗಿ ತಿಳಿಸಿದ್ದಾರೆ. ಇದೀಗ ಕಟ್ಟಡ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಉದ್ಘಾಟನೆಗೆ ಸಚಿನ್ ತೆಂಡೂಲ್ಕರ್ ಅವರನ್ನು ಕರೆಸುವ ಉದ್ದೇಶವನ್ನು ಶಾಲಾ ಆಡಳಿತ ಮಂಡಳಿ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...