alex Certify
ಕನ್ನಡ ದುನಿಯಾ       Mobile App
       

Kannada Duniya

ಏಪ್ರಿಲ್ ನಿಂದ ಬದಲಾಗಲಿದೆ ಶಾಲಾ ಶಿಕ್ಷಣ ನೀತಿ

ನರ್ಸರಿಯಿಂದ 12ನೇ ತರಗತಿಯವರೆಗೆ ಏಕೀಕೃತ ಶಿಕ್ಷಣ ಜಾರಿಗೆ ತರುವ ಘೋಷಣೆ ಮಾಡಿರುವ ಕೇಂದ್ರ ಸರ್ಕಾರ ಇದಕ್ಕೆ ತಯಾರಿ ಶುರುಮಾಡಿದೆ. ಸರ್ಕಾರ ಮಾರ್ಚ್ ವೇಳೆಗೆ ಇದಕ್ಕೆ ಸಂಬಂಧಿಸಿದಂತೆ ಕಾನೂನು ಜಾರಿಗೆ ತರಲಿದೆ. ಏಪ್ರಿಲ್ ಒಂದು ಅಂದ್ರೆ ಹೊಸ ಶೈಕ್ಷಣಿಕ ವರ್ಷದಿಂದ ದೇಶದಾದ್ಯಂತ ಏಕೀಕೃತ ಶಿಕ್ಷಣ ಜಾರಿಗೆ ಬರಲಿದೆ.

ಪ್ರಸ್ತುತ ದೇಶದಲ್ಲಿ ಶಿಕ್ಷಣ ವಿಭಜನೆಯಾಗಿದೆ. ಸರ್ವ ಶಿಕ್ಷಾ ಅಭಿಯಾನ ಹಾಗೂ ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರಾಥಮಿಕ ಶಿಕ್ಷಣ ನೀಡಲಾಗ್ತಿದೆ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಮಾಧ್ಯಮಿಕ ಶಿಕ್ಷಣ ನೀಡಲಾಗ್ತಿದೆ. ನರ್ಸರಿಗೆ ಈವರೆಗೂ ಶಾಲಾ ಶಿಕ್ಷಣದಲ್ಲಿ ಸ್ಥಾನ ಸಿಕ್ಕಿಲ್ಲ.

ಬಜೆಟ್ ನಲ್ಲಿ ಏಕೀಕೃತ ಶಿಕ್ಷಣ ಜಾರಿಗೆ ಘೋಷಣೆ ಮಾಡಿರುವ ಜೇಟ್ಲಿ ನರ್ಸರಿಗೂ ಶಿಕ್ಷಣದಲ್ಲಿ ಸ್ಥಾನ ನೀಡಿದ್ದಾರೆ. ಶೀಘ್ರದಲ್ಲಿಯೇ ಕ್ಯಾಬಿನೆಟ್ ನಲ್ಲಿ ಈ ಕಾನೂನಿನ ಬಗ್ಗೆ ಚರ್ಚೆ ನಡೆಯಲಿದೆ. ನಂತ್ರ ಯೋಜನೆ ಜಾರಿ ಪ್ರಕ್ರಿಯೆ ಶುರುವಾಗಲಿದೆ ಎಂದು ಸರ್ಕಾರ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...