alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಗನವಾಡಿಗೆ ಮಗಳು, 8ನೇ ಕ್ಲಾಸ್ ಗೆ ಅಮ್ಮ

school

ಬಾಲ್ಯವಿವಾಹ ತಡೆಗೆ ಏನೆಲ್ಲಾ ಕಾನೂನು ಕ್ರಮಕೈಗೊಂಡರೂ ಸಂಪೂರ್ಣ ನಿಯಂತ್ರಣ ಸಾಧ್ಯವಾಗಿಲ್ಲ. ಕೆಲವೊಮ್ಮೆ ಅಧಿಕಾರಿಗಳ ಸಮ್ಮುಖದಲ್ಲೇ ಅಲ್ಲದೇ, ಹಲವಾರು ಕಾರಣಗಳಿಂದ ಬಾಲ್ಯವಿವಾಹ ನಡೆಯುತ್ತಲೇ ಇರುತ್ತವೆ. ಹೀಗೆ ಬಾಲ್ಯವಿವಾಹದ ನಂತರದ ಬಾಲಕಿಯೊಬ್ಬಳ ಚಿತ್ರಣ ಇಲ್ಲಿದೆ ನೋಡಿ.

ಸರ್ಕಾರ, ಕಾನೂನು ಏನೇ ಕ್ರಮ ಕೈಗೊಂಡರೂ ಬಾಲ್ಯವಿವಾಹ ನಿಂತಿಲ್ಲ ಮತ್ತು ಅದರಿಂದಾಗುವ ಪರಿಣಾಮ ಏನು ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಕೋಲ್ಕತಾ ಸಮೀಪದ ಬುಡಕಟ್ಟು ಜನಾಂಗದ ಬಾಲಕಿ ಸಂತಾನಾ ಮುರ್ಮಾ 8ನೇ ತರಗತಿ ಓದುವಾಗಲೇ ಮನೆಯವರು ಒತ್ತಾಯದಿಂದ ಮದುವೆ ಮಾಡಿದ್ದಾರೆ. ನಂತರದ 4 ವರ್ಷದಲ್ಲಿ ಆಕೆಗೆ ಇಬ್ಬರು ಮಕ್ಕಳಾಗಿವೆ. ಸಂತಾನಾಗೆ ಶಾಲೆಗೆ ಮತ್ತೆ ಹೋಗಬೇಕೆಂಬ ಮನಸ್ಸಾಗಿದ್ದು, ಮಗಳನ್ನು ದಿನಾ ಅಂಗನವಾಡಿಗೆ ಬಿಟ್ಟು ಶಾಲೆಗೆ ಹೋಗಿ ಬರುತ್ತಿದ್ದಾಳೆ.

ಬಾಲ್ಯ ವಿವಾಹದ ಕಾರಣಕ್ಕೆ ಚಿಕ್ಕವಯಸ್ಸಿನಲ್ಲೇ ಮಕ್ಕಳಾದರೂ ಸಂತಾನಾ ಮುರ್ಮಾಳ ಓದಬೇಕೆಂಬ ಹಂಬಲ ಕಡಿಮೆಯಾಗಿಲ್ಲ. ಬಾಲ್ಯವಿವಾಹ ವಿರುದ್ಧ ಆಂದೋಲನ ನಡೆಸಲು ಹೊರಟಿರುವ ಈಕೆ ಎನ್ ಜಿ ಓ ಒಂದರ ನೆರವಿನಿಂದ 8ನೇ ತರಗತಿ ಓದುತ್ತಿದ್ದಾಳೆ. ಕೆಲವು ದಿನಗಳ ಹಿಂದೆ ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಷಣ ಕೂಡ ಮಾಡಿದ್ದಾಳೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...