alex Certify
ಕನ್ನಡ ದುನಿಯಾ       Mobile App
       

Kannada Duniya

ಗೂಮರ್ ಡಾನ್ಸ್ ವಿರೋಧಿಸಿ ಕರಣಿ ಸೇನೆಯಿಂದ ಶಾಲೆ ಮೇಲೆ ದಾಳಿ

ಸಂಜಯ್ ಲೀಲಾ ಬನ್ಸಾಲಿ ಪದ್ಮಾವತ ಚಿತ್ರಕ್ಕೆ ವಿರೋಧ ಮುಂದುವರೆದಿದೆ. ಕರಣಿ ಸೇನೆ ಸೇರಿದಂತೆ ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಮಧ್ಯಪ್ರದೇಶದ ರತ್ಲಂನಲ್ಲಿ ಪದ್ಮಾವತ್ ಚಿತ್ರದ ಗೂಮರ್ ಡಾನ್ಸ್ ಮಾಡಿದ್ದೇ ತಪ್ಪಾಗಿದೆ. ಶಾಲೆಗೆ ನುಗ್ಗಿದ ಕರಣಿ ಸೇನೆ ಕಾರ್ಯಕರ್ತರು ತನ್ನ ವಿರೋಧ ವ್ಯಕ್ತಪಡಿಸಿದ್ದಾರೆ.

ಸೇಂಟ್ ಪಾಲ್ಸ್ ಕಾನ್ವೆಂಟ್ ನಲ್ಲಿ ಸೋಮವಾರ ಗೂಮರ್ ಹಾಡಿಗೆ ವಿದ್ಯಾರ್ಥಿನಿಯರು ನೃತ್ಯ ಮಾಡುತ್ತಿದ್ದರು.ಈ ವೇಳೆ ಶಾಲೆಗೆ ಬಂದ ಕರಣಿ ಸೇನೆ ಕಾರ್ಯಕರ್ತರು ಕುರ್ಚಿ ಕಿತ್ತೆಸೆದು ತಮ್ಮ ವಿರೋಧ ವ್ಯಕ್ತಪಡಿಸಿದ್ರು. ಧ್ವನಿವರ್ದಕವನ್ನು ಹಾಳು ಮಾಡಿದ್ರು. ಕರಣಿ ಸೇನೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಕರಣಿ ಸೇನೆ ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಯನ್ನು ಒಪ್ಪುತ್ತಿಲ್ಲ. ಕರಣಿ ಸೇನೆ ಹೋರಾಟ ಮುಂದುವರೆದಿದ್ದು, ರಾಜಸ್ತಾನ, ಗೋವಾ ಸೇರಿದಂತೆ ಕೆಲ ಕಡೆ ಸರ್ಕಾರವೇ ಪದ್ಮಾವತ್ ಗೆ ನಿಷೇಧ ಹೇರಿದೆ.

 

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...