alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಡಹಗಲೇ ಕ್ಯಾಮರಾದಲ್ಲಿ ಸೆರೆಯಾಯ್ತು ದೆವ್ವ..?

ghost 3452ಈ ವಿಡಿಯೋ ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಇದು ಕುತೂಹಲವನ್ನಂತೂ ಹುಟ್ಟು ಹಾಕಿದೆ. Ghost World TV ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದು, ಆಪಾರ ಸಂಖ್ಯೆಯಲ್ಲಿ ವೀಕ್ಷಿಸಲಾಗಿದೆ.

ದೆವ್ವ, ಭೂತಗಳು ಮಧ್ಯ ರಾತ್ರಿಯಲ್ಲಿ ಮಾತ್ರ ಸಂಚರಿಸುತ್ತವೆಂಬ ಮಾತು ಪ್ರಚಲಿತದಲ್ಲಿದೆ. ಆದರೆ ರಾಷ್ಟ್ರೀಯ ಹೆದ್ದಾರಿ 10 ರಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದ್ದು, ಮನುಷ್ಯಾಕೃತಿಯ ನೆರಳೊಂದು ಹಾಡಹಗಲೇ ವಾಹನಗಳ ಮುಂದೆ ಚಲಿಸುತ್ತಿರುವ ದೃಶ್ಯ ಸೆರೆಯಾಗಿದೆ.

ಹೆದ್ದಾರಿಯಲ್ಲಿ ಒಂದು ಲಾರಿ ಹಾಗೂ ಬೈಕ್ ಬರುತ್ತಿದ್ದು, ಮನುಷ್ಯಾಕೃತಿಯ ನೆರಳೊಂದು ಲಾರಿ ಹಾಗೂ ಬೈಕ್ ಬರುತ್ತಿದ್ದರೂ ಅದರ ಮುಂದಿನಿಂದಲೇ ರಸ್ತೆಯನ್ನು ದಾಟಿದೆ. ಸೂಕ್ಷ್ಮವಾಗಿ ಗಮನಿಸಿದರೆ ಇದು ಗೋಚರಿಸುತ್ತಿದ್ದು, ಈ ವಿಡಿಯೋವನ್ನು ಸೃಷ್ಟಿಸಲಾಗಿದೆಯೋ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲವಾದರೂ ಕುತೂಹಲವನ್ನಂತೂ ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...