alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತಷ್ಟು ಸಂಕಷ್ಟದಲ್ಲಿ ವಿಜಯ್ ಮಲ್ಯ

In this June 3, 2010 file photo, United Breweries Group Chairman Vijay Mallya attends the Global Investors Meet organized by Karnataka state government in Bangalore, India. British police said Tuesday, April 18, 2017, they have arrested Indian business tycoon Vijay Mallya in London. (AP Photo/Aijaz Rahi, File)

ಬ್ಯಾಂಕ್ ಗಳಿಂದ ಸಾಲ ಪಡೆದು ದೇಶ ಬಿಟ್ಟಿರುವ ಮದ್ಯದ ದೊರೆ ವಿಜಯ್ ಮಲ್ಯ ಸಂಕಷ್ಟ ಮತ್ತಷ್ಟು ಜಾಸ್ತಿಯಾಗಿದೆ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮಲ್ಯ ದೋಷಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಜುಲೈ 10ರಂದು ನಡೆಯಲಿರುವ ವಿಚಾರಣೆಗೆ ಮಲ್ಯ ಹಾಜರಾಗಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಕೋರ್ಟ್ ಗೆ ಹಾಜರಾಗಿ ತಮ್ಮ ಹೇಳಿಕೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಡಿಯಾ ಜಿಯೋ ಸಂಸ್ಥೆಯಿಂದ ಸಿಕ್ಕ 40 ದಶಲಕ್ಷ ಡಾಲರ್ ಹಣವನ್ನು ಭಾರತಕ್ಕೆ ತರುವಂತೆ ಮಲ್ಯಗೆ ಸೂಚನೆ ನೀಡಬೇಕೆಂದು ಕಳೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಗೆ ಬ್ಯಾಂಕ್ ಅಸೋಸಿಯೇಷನ್ ಮನವಿ ಸಲ್ಲಿಸಿತ್ತು. ಒಂದು ವೇಳೆ ಹಣ ತೆಗೆದುಕೊಂಡು ಬಂದಿಲ್ಲವಾದಲ್ಲಿ ಸ್ವತಃ ಕೋರ್ಟ್ ಗೆ ಹಾಜರಾಗುವಂತೆ ಆದೇಶ ನೀಡಬೇಕೆಂದು ಮನವಿಯಲ್ಲಿ ಹೇಳಲಾಗಿತ್ತು.

ಕರ್ನಾಟಕ ಹೈಕೋರ್ಟ್ ಯಾವುದೇ ಹಣವನ್ನು ವರ್ಗಾವಣೆ ಮಾಡಬಾರದೆಂದು ಮಲ್ಯಗೆ ಸೂಚನೆ ನೀಡಿತ್ತು. ಆದ್ರೆ ಇದ್ರ ಉಲ್ಲಂಘನೆ ಮಾಡಿರುವ ಮಲ್ಯ 40 ದಶಲಕ್ಷ ಡಾಲರ್ ಹಣವನ್ನು ಮೂವರು ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ. ಇದು ನ್ಯಾಯಾಂಗ ನಿಂದನೆ ಎಂದು ಬ್ಯಾಂಕ್ ಅಸೋಸಿಯೇಷನ್  ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...