alex Certify
ಕನ್ನಡ ದುನಿಯಾ       Mobile App
       

Kannada Duniya

ಎ.ಟಿ.ಎಂ. ಗಳಲ್ಲಿ ಸಿಗಲಿದೆ 20, 50 ರೂ. ನೋಟು

20rup

ನವದೆಹಲಿ: ದೇಶಾದ್ಯಂತ ನೋಟಿನ ವಿಚಾರವಾಗಿ ನಡೆಯುತ್ತಿರುವ ಹಂಗಾಮ ಕಡಿಮೆಯಾಗಿಲ್ಲ. ರದ್ದಾದ ನೋಟುಗಳ ಬದಲಾವಣೆಗೆ ಜನ ಬ್ಯಾಂಕ್, ಪೋಸ್ಟ್ ಆಫೀಸ್ ಗಳಿಗೆ ಮುಗಿಬಿದ್ದಿದ್ದಾರೆ.

ಅಗತ್ಯತೆಗಳಿಗೆ ಅನುಗುಣವಾಗಿ ಜನರಿಗೆ ಹಣ ಸಿಗುತ್ತಿಲ್ಲ. ಬೇಕಾದ ಹಣ ಪಡೆದುಕೊಳ್ಳಲು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಹಣ ಸಿಕ್ಕರೂ ಚಿಲ್ಲರೆ ಸಮಸ್ಯೆಯಿಂದ ಜನ ಹೈರಾಣಾಗಿದ್ದಾರೆ. ಜನರ ಸಮಸ್ಯೆಯನ್ನು ದೂರ ಮಾಡಲು ಎಸ್.ಬಿ.ಐ.ನ ಎ.ಟಿ.ಎಂ.ಗಳಲ್ಲಿ 20 ರೂ. ಹಾಗೂ 50 ರೂ. ನೋಟುಗಳನ್ನು ತುಂಬಲಾಗುವುದು ಎಂದು ಚೇರ್ ಮನ್ ಆರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.

ಜನರಿಗೆ ಚಿಲ್ಲರೆ ಸಮಸ್ಯೆ ಆಗಿರುವ ಹಿನ್ನಲೆಯಲ್ಲಿ ಬೇರೆ ನೋಟುಗಳ ಜೊತೆಯಲ್ಲಿ 20 ರೂ., 50 ರೂ. ನೋಟುಗಳನ್ನು ಎ.ಟಿ.ಎಂ.ಗಳಿಗೆ ತುಂಬಿಸಲಾಗುವುದು. ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...