alex Certify
ಕನ್ನಡ ದುನಿಯಾ       Mobile App
       

Kannada Duniya

ಕಳಪೆ ಕೈಬರಹಕ್ಕೆ ದಂಡ ವಿಧಿಸಿದ ಬಳಿಕ ವೈದ್ಯ ವಿದ್ಯಾರ್ಥಿಗಳಿಗೆ ಶುರುವಾಗಿದೆ ವಿಶೇಷ ತರಬೇತಿ

ಇಂದೋರ್: ಅಲಹಾಬಾದ್ ನ ಹೈಕೋರ್ಟ್ ವೈದ್ಯರ ಕಳಪೆ ಕೈಬರಹಕ್ಕೆ ತಲಾ 5000 ರೂ. ದಂಡ ವಿಧಿಸಿದ ಪರಿಣಾಮವಾಗಿ ಇದೀಗ ಇಂದೋರ್ ನ ಎಂಜಿಎಂ ಮೆಡಿಕಲ್ ಕಾಲೇಜ್, ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೈಬರಹದ ವಿಶೇಷ ತರಬೇತಿ ಕೊಡಲು ಆರಂಭಿಸಿದೆ.

ರೋಗಿಗಳು ವೈದ್ಯರ ಕಳಪೆ ಕೈಬರಹದ ವೈದ್ಯಕೀಯ ವರದಿಯನ್ನು ಓದಿ ಅರ್ಥೈಸಿಕೊಳ್ಳಲು ಆಗದೆ ತಪ್ಪಾಗಿ ಔಷಧಿಗಳನ್ನು ಸೇವಿಸಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇಂತಹ ಕೈ ಬರಹಗಳಿಂದ ಜನರಿಗೆ ವೈದ್ಯಕೀಯ ವಿಮೆ ಪಡೆಯಲು ಕೂಡ ಸಾಧ್ಯವಾಗುತ್ತಿಲ್ಲ. ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಸಂಭವಿಸುವುದನ್ನು ತಡೆಯಲು ಮಧ್ಯ ಪ್ರದೇಶದ ಎಂಜಿಎಂ ವೈದ್ಯಕೀಯ ಕಾಲೇಜು ತನ್ನ ವಿದ್ಯಾರ್ಥಿಗಳಿಗೆ ಕೈಬರಹದ ವಿಶೇಷ ತರಬೇತಿ ಕೊಡಲು ಮುಂದಾಗಿದೆ. ಅಲ್ಲದೇ ‘ಆಯುಷ್ಮಾನ್‌ ಭಾರತ್‌’ ಯೋಜನೆಯೂ ರೋಗಿಗಳಿಗೆ ಅರ್ಥವಾಗುವಂತಹ ಉತ್ತಮ ಕೈ ಬರಹ ಇರಬೇಕು ಎಂದು ಸೂಚನೆ ನೀಡಿದೆ.

‘ರೋಗಿಗಳಿಗೆ ವೈದ್ಯರ ಕೈಬರಹ ಅರ್ಥವಾಗುವ ನಿಟ್ಟಿನಲ್ಲಿ ಈ ವಿಶೇಷ ಕೈ ಬರಹ ತರಗತಿಗಳು ಅನುಕೂಲವಾಗಲಿದೆ. ವೈದ್ಯರ ಕೆಟ್ಟ ಕೈ ಬರಹ ಹಲವು ವರ್ಷಗಳ ಸಮಸ್ಯೆಯಾಗಿದೆ. ಇದೊಂದು ಸಾಮಾಜಿಕ ಸಮಸ್ಯೆ ಕೂಡ. ವೈದ್ಯರ ಕೈ ಬರಹ ಉತ್ತಮಗೊಳಿಸುವ ನಿಟ್ಟಿನಲ್ಲಿ ತರಗತಿ ನಡೆಸಲು ಮುಂದಾಗಿದ್ದೇವೆ ಎಂದು ಎಂಜಿಎಂ ಡೀನ್‌ ಡಾ. ಜ್ಯೋತಿ ಬಿಂದಾಲ್‌ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...