alex Certify
ಕನ್ನಡ ದುನಿಯಾ       Mobile App
       

Kannada Duniya

ತೆಂಗಿನಕಾಯಿ ತಂದ ಸಂಕಷ್ಟ..!

coconut-flightಬ್ಯಾಗ್ ನಲ್ಲಿದ್ದ ಎರಡು ತೆಂಗಿನಕಾಯಿಗಳಿಂದಾಗಿ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಗೆ ಫ್ಲೈಟ್ ಮಿಸ್ ಆಗಿದೆ.

ನಾಝಿಶ್ ಬೇಗಂ, ತಮ್ಮ ಪತಿ ಮತ್ತು ಮೂವರು ಮಕ್ಕಳೊಂದಿಗೆ ದುಬೈನಲ್ಲಿ ನೆಲೆಸಿದ್ದಾರೆ. ಅಕ್ಟೋಬರ್ 5 ರಂದು ಬೆಳಗ್ಗೆ 10.30ಕ್ಕೆ ದಮ್ಮಮ್ ಗೆ ಹೊರಡಲಿದ್ದ ವಿಮಾನದಲ್ಲಿ ಆಕೆ ಪ್ರಯಾಣ ಬೆಳೆಸಬೇಕಿತ್ತು. ನಿಗದಿತ ಸಮಯಕ್ಕೆ ಸರಿಯಾಗಿ ನಾಝಿಶ್ ಏರ್ ಪೋರ್ಟ್ ಗೂ ಬಂದಿದ್ರು.

ಬೋರ್ಡಿಂಗ್ ಪಾಸ್ ಪಡೆದ ಬಳಿಕ ಸಿಬ್ಬಂದಿ ಅವರ ಲಗೇಜ್ ಚೆಕ್ ಮಾಡಿದ್ರು. ಅವರ ಬ್ಯಾಗ್ ನಲ್ಲಿದ್ದ 2 ತೆಂಗಿನ ಕಾಯಿಗಳನ್ನು ನೋಡಿ ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ತೆಂಗಿನ ಕಾಯಿ ತರುವಂತಿಲ್ಲ ಅಂತೆಲ್ಲ ದಬಾಯಿಸಿದ್ದಾರೆ. ಸಿಬ್ಬಂದಿ ಪರಿಶೀಲನೆ ನಡೆಸಿ ಮುಗಿಸುವಷ್ಟರಲ್ಲಿ ನಾಝಿಶ್ ಅವರಿಗೆ ಫ್ಲೈಟ್ ಮಿಸ್ ಆಗಿದೆ.

ನಂತರದ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡುವುದಾಗಿ ಹೇಳಿದ್ದ ಜೆಟ್ ಏರ್ ವೇಸ್ ಕೊನೆಗೆ ಮನೆಗೆ ಹೋಗಿ ಟಿಕೆಟ್ ಬುಕ್ ಮಾಡಿಕೊಳ್ಳಿ ಎಂದುಬಿಟ್ಟಿದೆ. 3 ತಿಂಗಳ ಹಸುಗೂಸು ಸೇರಿದಂತೆ ಮೂವರು ಮಕ್ಕಳ ಜೊತೆ ಬಂದಿದ್ದ ನಾಝಿಶ್, ಏರ್ ಪೋರ್ಟ್ ನಲ್ಲಿ ಕಂಗಾಲಾಗಿ ಹೋಗಿದ್ದಾರೆ. ಆದ್ರೆ ವಿಮಾನ ನಿಲ್ದಾಣ ಸಿಬ್ಬಂದಿ ಮಾತ್ರ ಇದ್ರಲ್ಲಿ ತಮ್ಮದೇನೂ ತಪ್ಪಿಲ್ಲ ಎನ್ನುತ್ತಿದ್ದಾರೆ. ಘಟನೆ ಸಂಬಂಧ ಜೆಟ್ ಏರ್ ವೇಸ್ ಬೇಷರತ್ ಕ್ಷಮೆ ಯಾಚಿಸಬೇಕೆಂದು ನಾಝಿಶ್ ಅವರ ಪತಿ ಮೊಹಮ್ಮದ್ ಮೆಹಬೂಬ್ ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...