alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತೆ ಅತ್ಯಾಚಾರವೆಸಗಿದ ಶಿಕ್ಷಕನಿಗೆ ಮರಣದಂಡನೆ

ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಾಲ್ಕು ವರ್ಷದ ಮುಗ್ದೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆರೋಪಿ ಮಹೇಂದ್ರ ಸಿಂಗ್ ಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

ಆರೋಪಿ ಮಹೇಂದ್ರ ಸರ್ಕಾರಿ ಶಾಲೆಯೊಂದರ ಅತಿಥಿ ಶಿಕ್ಷಕನಾಗಿದ್ದಾನೆ. ಜುಲೈ 1ರ ರಾತ್ರಿ ಬಾಲಕಿ ಮನೆಗೆ ನುಗ್ಗಿ ಬಾಲಕಿ ಅಪಹರಿಸಿದ್ದ ಮಹೇಂದ್ರ ಅತ್ಯಾಚಾರವೆಸಗಿದ್ದ. ಬಾಲಕಿ ಮೃತಪಟ್ಟಿದ್ದಾಳೆಂದುಕೊಂಡ ಮಹೇಂದ್ರ ಆಕೆಯನ್ನು ಕಾಡಿನಲ್ಲಿ ಎಸೆದು ಹೋಗಿದ್ದ. ಪ್ರಕರಣದ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

ಸ್ಥಳದಲ್ಲಿ ಸಿಕ್ಕ ವಸ್ತು ಹಾಗೂ ಸಾಕ್ಷಿಯ ಆಧಾರದ ಮೇಲೆ ಪೊಲೀಸರು ತನಿಖಾ ವರದಿಯನ್ನು ಕೋರ್ಟ್ ಮುಂದಿಟ್ಟಿದ್ದರು. 47 ದಿನಗಳ ಕಾಲ ವಿಚಾರಣೆ ನಡೆಸಿದ ಕೋರ್ಟ್ ಬುಧವಾರ ಶಿಕ್ಷೆ ಪ್ರಕಟಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...