alex Certify
ಕನ್ನಡ ದುನಿಯಾ       Mobile App
       

Kannada Duniya

ತೀರ್ಪು ಬರ್ತಿದ್ದಂತೆ ಅನಾರೋಗ್ಯಕ್ಕೊಳಗಾದ ಶಶಿಕಲಾ ಪತಿ

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ನಟರಾಜನ್ ಜೈಲು ಸೇರಿದ್ದರೆ ಈಗ ಪತಿ ನಟರಾಜನ್ ಸರದಿ. ಶಶಿಕಲಾ ಪತಿ ನಟರಾಜನ್ ಗೆ ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದ್ದ ಎರಡು ವರ್ಷ ಜೈಲು ಶಿಕ್ಷೆಯನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ. ತೀರ್ಪು ಬರ್ತಿದ್ದಂತೆ ನಟರಾಜನ್ ಅನಾರೋಗ್ಯಕ್ಕೊಳಗಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚೆಗಷ್ಟೇ ಚೆನ್ನೈ ಆಸ್ಪತ್ರೆಯಲ್ಲಿ ನಟರಾಜನ್ ಗೆ ಮೂತ್ರಪಿಂಡ ಹಾಗೂ ಲಿವರ್ ಕಸಿ ಮಾಡಲಾಗಿತ್ತು. ಪತಿ ಅನಾರೋಗ್ಯ ಹಿನ್ನೆಲೆಯಲ್ಲಿ ಶಶಿಕಲಾ 5 ದಿನ ಪೆರೋಲ್ ಮೇಲೆ ಹೊರ ಬಂದಿದ್ದರು.

ಶಶಿಕಲಾ ಪತಿ ನಟರಾಜನ್ ಪ್ರಕರಣ 1994ರದ್ದು. ಆಗ ಲೆಕ್ಸಸ್ ಕಾರನ್ನು ಅಕ್ರಮವಾಗಿ ಆಮದು ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರಲ್ಲಿ ಸಿಬಿಐ ಕೋರ್ಟ್ ನಟರಾಜನ್ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ನಟರಾಜನ್ ಮದ್ರಾಸ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...