alex Certify
ಕನ್ನಡ ದುನಿಯಾ       Mobile App
       

Kannada Duniya

ಶಶಿಕಲಾಗೆ ನೋಟೀಸ್ ನೀಡಿದ ಚುನಾವಣಾ ಆಯೋಗ

sasikala-natarajanಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿರುವ ಶಶಿಕಲಾ ನಟರಾಜನ್ ರ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಬಣ ಸಲ್ಲಿಸಿದ್ದ ದೂರಿನ ಹಿನ್ನಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಇಂದು ಶಶಿಕಲಾರಿಗೆ ನೋಟೀಸ್ ಜಾರಿ ಮಾಡಿದ್ದು, ವಾರದೊಳಗೆ ಉತ್ತರಿಸುವಂತೆ ಸೂಚನೆ ನೀಡಿದೆ.

ಶಶಿಕಲಾ ಆಯ್ಕೆ ವೇಳೆ ಪಕ್ಷದ ನಿಯಮಾವಳಿಗಳನ್ನು ಪಾಲಿಸಲಾಗಿಲ್ಲವೆಂದು ಹೇಳಿದ್ದ ಪನ್ನೀರ್ ಸೆಲ್ವಂ ಬಣ, ತಮ್ಮದೇ ನೈಜ ಎಐಎಡಿಎಂಕೆ ಪಕ್ಷವೆಂದು ಹೇಳಿಕೊಂಡಿತ್ತಲ್ಲದೇ ಶಶಿಕಲಾರನ್ನು ಪಕ್ಷದಿಂದ ಉಚ್ಚಾಟಿಸಿರುವುದಾಗಿ ತಿಳಿಸಿತ್ತು.

ದೂರಿನ ಹಿನ್ನಲೆಯಲ್ಲಿ ಈಗ ಶಶಿಕಲಾರಿಗೆ ಚುನಾವಣಾ ಆಯೋಗದಿಂದ ನೋಟೀಸ್ ಜಾರಿ ಮಾಡಲಾಗಿದೆ. ಈ ಮಧ್ಯೆ ಚೆನ್ನೈನಲ್ಲಿ ಮಾತನಾಡಿರುವ ಎಐಎಡಿಎಂಕೆ ವಕ್ತಾರ ಎಸ್. ರಾಮಚಂದ್ರನ್, ಪಕ್ಷದ ಬೈಲಾದಂತೆ ಶಶಿಕಲಾರ ಆಯ್ಕೆ ನಿಯಮಬದ್ದವಾಗಿ ನಡೆದಿದೆ. ಚುನಾವಣಾ ಆಯೋಗದ ನೋಟೀಸ್ ಗೆ ಸೂಕ್ತ ಉತ್ತರ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ವಿಪ್ ಉಲ್ಲಂಘಿಸಿ ಮತ ಚಲಾಯಿಸಿರುವ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಸೇರಿದಂತೆ 11 ಮಂದಿ ಶಾಸಕರ ವಿರುದ್ದ ಶೀಘ್ರದಲ್ಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...