alex Certify
ಕನ್ನಡ ದುನಿಯಾ       Mobile App
       

Kannada Duniya

ಎಐಎಡಿಎಂಕೆಯಿಂದ ಪನ್ನೀರ್ ಸೆಲ್ವಂ ವಜಾ

panneerselvam

ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಎಐಎಡಿಎಂಕೆ ನಾಯಕಿ ಶಶಿಕಲಾ ಜೈಲು ಪಾಲಾಗಿದ್ದಾರೆ. ಹಾಗಾಗಿ ಸಿಎಂ ಆಗಬೇಕು ಎಂಬ ಅವರ ಕನಸು ನುಚ್ಚು ನೂರಾಗಿದೆ. ಇನ್ನೊಂದೆಡೆ ಓ ಪನ್ನೀರ್ ಸೆಲ್ವಂ ಅವರನ್ನು ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ್ಲೇ ವಜಾ ಮಾಡಲಾಗಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ಬೆಂಬಲಿಗರ ಜೊತೆ ಸಭೆ ನಡೆಸಿದ ಶಶಿಕಲಾ ತಮ್ಮ ವಿರುದ್ಧ ಬಂಡಾಯವೆದ್ದಿರುವ ಪನ್ನೀರ್ ಸೆಲ್ವಂರನ್ನು ಪಕ್ಷದಿಂದ ವಜಾ ಮಾಡಿದ್ದಾರೆ. ಜಯಲಲಿತಾ ಆಪ್ತರು ಎನಿಸಿಕೊಂಡಿದ್ದ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದ್ದಾರೆ.

ಪಳನಿಸ್ವಾಮಿ ಅವರನ್ನು ಬೆಂಬಲಿಸಿ ಶಾಸಕರ ಸಹಿಯುಳ್ಳ ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿದೆ. ಇನ್ನೊಂದೆಡೆ ಇನ್ನಿಬ್ಬರು ಶಾಸಕರು ಪನ್ನೀರ್ ಸೆಲ್ವಂ ಬಣ ಸೇರಿಕೊಂಡಿದ್ದಾರೆ. ಕೂವತ್ತೂರ್ ರೆಸಾರ್ಟ್ ಗೆ ಆಗಮಿಸಿ ಅಲ್ಲಿ ಬೀಡುಬಿಟ್ಟಿರುವ ಶಾಸಕರ ಜೊತೆ ಚರ್ಚೆ ನಡೆಸಲು ಪನ್ನೀರ್ ಸೆಲ್ವಂ ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...