alex Certify
ಕನ್ನಡ ದುನಿಯಾ       Mobile App
       

Kannada Duniya

ಎಐಎಡಿಎಂಕೆಯಿಂದ ಶಶಿಕಲಾ ಕುಟುಂಬಕ್ಕೆ ಗೇಟ್ ಪಾಸ್

sasikala-00987ತಮಿಳುನಾಡು ಮುಖ್ಯಮಂತ್ರಿ ಗಾದಿಗಾಗಿ ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ ಬಣಗಳ ನಡುವೆ ನಡೆಯುತ್ತಿದ್ದ ಪೈಪೋಟಿಯಲ್ಲಿ ಶಶಿಕಲಾ ಬಣ ಮುನ್ನಡೆ ಸಾಧಿಸಿದೆ. ಶಶಿಕಲಾ ಬೆಂಬಲಿಗ ಎಡಪ್ಪಾಡಿ ಕೆ. ಪಳನಿಸ್ವಾಮಿ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಪನ್ನೀರ್ ಸೆಲ್ವಂ ಹಾಗೂ ಅವರ ಬೆಂಬಲಿಗರನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಪಕ್ಷದಿಂದ ಉಚ್ಚಾಟನೆ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಶಶಿಕಲಾ ಹಾಗೂ ಅವರ ಸಹೋದರರಾದ ಟಿ.ಟಿ.ವಿ. ದಿನಕರನ್ ಮತ್ತು ಡಾ.ಎಂ. ವೆಂಕಟೇಶನ್ ರನ್ನು ಎಐಎಡಿಎಂಕೆ ಅಧ್ಯಕ್ಷ ಮಧುಸೂದನನ್ ಇಂದು ಉಚ್ಚಾಟನೆ ಮಾಡಿದ್ದಾರೆ.

ಜಯಲಲಿತಾ ಅವಧಿಯಲ್ಲಿ ಶಶಿಕಲಾ ಸಹೋದರರಿಬ್ಬರು ಎಐಎಡಿಎಂಕೆಯಿಂದ ಉಚ್ಚಾಟನೆಗೊಂಡಿದ್ದು, ಶಶಿಕಲಾ ಜೈಲಿಗೆ ತೆರಳುವ ಮುನ್ನ ಇಬ್ಬರನ್ನೂ ಮತ್ತೆ ಪಕ್ಷಕ್ಕೆ ಬರ ಮಾಡಿಕೊಂಡು ಆಯಕಟ್ಟಿನ ಸ್ಥಾನ ನೀಡಲಾಗಿತ್ತು.

ಈ ಮಧ್ಯೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಪಳನಿಸ್ವಾಮಿ ನಾಳೆ ಸದನದಲ್ಲಿ ಬಹುಮತ ಸಾಬೀತುಪಡಿಸಬೇಕಿದ್ದು, ಇದಕ್ಕೆ ತಿರುಗೇಟು ನೀಡಲು ಪನ್ನೀರ್ ಸೆಲ್ವಂ ಬಣ ಸಜ್ಜಾಗಿದೆ. 11 ಕ್ಕೂ ಅಧಿಕ ಮಂದಿ ಎಐಎಡಿಎಂಕೆ ಶಾಸಕರು ಸರ್ಕಾರದ ವಿರುದ್ದ ಮತ ಚಲಾಯಿಸಲು ತೀರ್ಮಾನಿಸಿದ್ದಾರೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...