alex Certify
ಕನ್ನಡ ದುನಿಯಾ       Mobile App
       

Kannada Duniya

ಸರಬ್ಜಿತ್ ಸಿಂಗ್ ಸಹೋದರಿ ಬಿಜೆಪಿ ಸೇರ್ಪಡೆ

sarabjit-sis

2013ರಲ್ಲಿ ಪಾಕಿಸ್ತಾನ ಜೈಲಿನಲ್ಲಿ ಮೃತಪಟ್ಟ ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಂಜಾಬ್ ನಲ್ಲಿ ಕಿಸಾನ್ ಮೋರ್ಚಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮತ್ತು ಸಚಿವ ಸುರ್ಜಿತ್ ಜ್ಯಾನಿ ಅವರ ಸಮ್ಮುಖದಲ್ಲಿ ದಲ್ಬೀರ್ ಕೌರ್ ಕಮಲಪಡೆ ಸೇರಿದ್ದಾರೆ.

ಪಾಕಿಸ್ತಾನ ಜೈಲಿನಲ್ಲಿದ್ದ ತಮ್ಮ ಸಹೋದರನನ್ನು ಭಾರತಕ್ಕೆ ಕರೆತರಲು 2005 ರಿಂದ್ಲೂ ಪ್ರಯತ್ನ ಮಾಡುತ್ತಿದ್ದ ದಲ್ಬೀರ್, ಆಗಿನಿಂದ್ಲೇ ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ರು. ದಲ್ಬೀರ್ ಸಹೋದರ ಸರಬ್ಜಿತ್ ಸಿಂಗ್ ಅವರ ಮೇಲೆ ಭಯೋತ್ಪಾದನೆ ಹಾಗೂ ಗೂಢಚಾರಿಕೆ ಆರೋಪ ಹೊರಿಸಿದ್ದ ಪಾಕಿಸ್ತಾನ ಕೋರ್ಟ್, ಅವರಿಗೆ 1991ರಲ್ಲಿ ಮರಣ ದಂಡನೆ ವಿಧಿಸಿತ್ತು. 2008 ರಲ್ಲಿ ಮರಣದಂಡನೆಗೆ ತಡೆ ನೀಡಲಾಗಿತ್ತು. ಆದ್ರೆ 2013ರಲ್ಲಿ ಪಾಕಿಸ್ತಾನ ಜೈಲಿನಲ್ಲಿ ಸಹಖೈದಿ ನಡೆಸಿದ ಹಲ್ಲೆಯಲ್ಲಿ ಸರಬ್ಜಿತ್ ಸಿಂಗ್ ಮೃತಪಟ್ಟಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...