alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿನಲ್ಲಿ 440 ರೂಪಾಯಿ ಉಳಿತಾಯ ಮಾಡಿದ ಸಂಜಯ್ ದತ್

sanjaydutt-new-read

ಬಾಲಿವುಡ್ ಮುನ್ನಾಬಾಯ್ ಸಂಜಯ್ ದತ್ ಫೆಬ್ರವರಿ 25ರಂದು ಜೈಲಿನಿಂದ ಹೊರ ಬರ್ತಿದ್ದಾರೆ. ನಾಳೆ ಬೆಳಿಗ್ಗೆ 9 ಗಂಟೆಗೆ ಅವರು ಪುಣೆಯ ಯರವಾಡಾ ಜೈಲಿನಿಂದ ಹೊರ ಬರಲಿದ್ದಾರೆ. ಅವರ ಸ್ವಾಗತಕ್ಕೆ ಕುಟುಂಬ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ನಡುವೆ ಜೈಲಿನಲ್ಲೂ ಸಂಜಯ್ ದುಡಿದಿದ್ದಾರೆ.

ಯಸ್, ಸಾಮಾನ್ಯ ಖೈದಿಗಳಂತೆ ಇದ್ದ ಸಂಜಯ್ ಜೈಲಿನಲ್ಲೂ ಕೆಲಸ ಮಾಡಿದ್ದಾರೆ. ಕಾಗದದ ಚೀಲ ಮಾಡಿ ಹಣ ಸಂಪಾದಿಸಿದ್ದಾರೆ. ಜೈಲಿನಲ್ಲಿರುವ ಸಂಜಯ್ ಕಾಗದದ ಚೀಲ ತಯಾರಿಸುವ ಕೆಲಸ ಮಾಡಿ 440 ರೂಪಾಯಿ ಉಳಿಸಿದ್ದಾರಂತೆ.

1993 ಮಾರ್ಚ್ 12ರಂದು ನಡೆದ ಮುಂಬೈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ದತ್ ಗೆ ಸುಪ್ರೀಂ ಕೋರ್ಟ್ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಮೊದಲೇ 18 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ ಸಂಜಯ್, ನಂತರ ತಮ್ಮ ಶಿಕ್ಷೆ ಪೂರ್ಣಗೊಳಿಸಿದರು. ಮಾರ್ಚ್ 2013ರಂದು ಉಳಿದ ಮೂರುವರೆ ವರ್ಷಗಳ ಶಿಕ್ಷೆ ಪೂರ್ಣಗೊಳಿಸಲು ದತ್ ಜೈಲು ಸೇರಿದ್ದರು.   ಸನ್ನಡತೆ ಆಧಾರದ ಮೇಲೆ 114 ದಿನ ಮೊದಲೇ ಸಂಜಯ್ ಅವರನ್ನು ಜೈಲಿನಿಂದ ಮುಕ್ತಿಗೊಳಿಸಲಾಗ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...