alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪತ್ನಿ ಮನೆಯಲ್ಲೇ ಕಳ್ಳತನ, ತೆಲುಗು ನಟನ ಬಂಧನ

ಮಾಜಿ ಪತ್ನಿಯ ಮನೆಯಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ತೆಲುಗು ನಟ ಸಾಮ್ರಾಟ್ ರೆಡ್ಡಿಯನ್ನು ಬಂಧಿಸಲಾಗಿದೆ. ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಕೆಲವೊಂದು ಸಾಕ್ಷ್ಯಗಳನ್ನು ಸಾಮ್ರಾಟ್ ಕದ್ದೊಯ್ದಿದ್ದಾನೆ ಅಂತಾ ಕೆ.ಹರಿತಾ ರೆಡ್ಡಿ ದೂರು ನೀಡಿದ್ದರು.

ಸಾಮ್ರಾಟ್ ರೆಡ್ಡಿಯ ಅಸಲಿ ಹೆಸರು ಜಿ.ವಿ.ಎಸ್ ಕೃಷ್ಣ ರೆಡ್ಡಿ. ಮಾಧಾಪುರದಲ್ಲಿರೋ ಹರಿತಾ ನಿವಾಸಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ ಸಾಮ್ರಾಟ್, ಕೆಲವೊಂದು ವಸ್ತುಗಳನ್ನು ಕಳವು ಮಾಡಿದ್ದಾರಂತೆ. ಸಿಸಿ ಟಿವಿಯನ್ನೂ ಹಾಳು ಮಾಡಿ, ತಾನು ಪ್ರವೇಶಿಸಿರುವ ದೃಶ್ಯಗಳಿದ್ದ ಡಿವಿಆರ್ ಅನ್ನು ಕೊಂಡೊಯ್ದಿದ್ದಾರಂತೆ.

2010ರಲ್ಲಿ ರಿಲೀಸ್ ಆದ ಪಂಚಾಕ್ಷರಿ ಚಿತ್ರದಲ್ಲಿ ಸಾಮ್ರಾಟ್, ಅನುಷ್ಕಾ ಶೆಟ್ಟಿ ಜೊತೆಗೆ ನಟಿಸಿದ್ದರು. ಕಿಟ್ಟು ಉನ್ನಾಡು ಜಗ್ರಾತಾ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಜನವರಿ 13ರಂದು ತಾನು ಮನೆಯಲ್ಲಿ ಇಲ್ಲದ ವೇಳೆ ಸಾಮ್ರಾಟ್ ಮತ್ತವರ ಸಹೋದರಿ ಕಳವು ಮಾಡಿದ್ದಾರೆ ಅಂತಾ ಹರಿತಾ ದೂರು ನೀಡಿದ್ದಾರೆ.

ಸದ್ಯ ಸಾಮ್ರಾಟ್ ಸಹೋದರಿ ಗೋವಾದಲ್ಲಿದ್ದು, ಆಕೆಯನ್ನು ಕೂಡ ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಇಂಟೀರಿಯರ್ ಡಿಸೈನರ್ ಆಗಿರೋ ಹರಿತಾರನ್ನು 2015ರಲ್ಲಿ ಸಾಮ್ರಾಟ್ ಮದುವೆಯಾಗಿದ್ದರು. ಸಾಮ್ರಾಟ್ ತಮಗೆ ವರದಕ್ಷಿಣೆ ಕಿರುಕುಳ ನೀಡುತ್ತಿರುವುದಾಗಿ ಹರಿತಾ ಕೇಸ್ ದಾಖಲಿಸಿದ್ದರು.

ಈ ಪ್ರಕರಣದಲ್ಲಿ ಇತ್ತೀಚೆಗಷ್ಟೆ ಸಾಮ್ರಾಟ್ ಗೆ ಜಾಮೀನು ಸಿಕ್ಕಿತ್ತು. ಸಾಮ್ರಾಟ್ ಡ್ರಗ್ ಅಡಿಕ್ಟ್ ಅಂತಾ ಆರೋಪಿಸಿರುವ ಹರಿತಾ, ಮತ್ತೋರ್ವ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಅಂತಾನೂ ದೂರಿದ್ದಾಳೆ. ಆದ್ರೆ ಇದೆಲ್ಲವೂ ಸುಳ್ಳು ಎನ್ನುತ್ತಿರೋ ಸಾಮ್ರಾಟ್, ತಾನು ನಟಿಸಬಾರದು ಅನ್ನೋದೇ ಹರಿತಾಳ ಉದ್ದೇಶವಾಗಿತ್ತು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...