alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಬಿಜೆಪಿ ನಾಯಕರ ಈ ಫೋಟೋ

ಮುಂಬೈನಲ್ಲಿ ಸುರಿಯುತ್ತಿರೋ ಮಹಾಮಳೆ ಜನಸಾಮಾನ್ಯರನ್ನು ಮಾತ್ರವಲ್ಲ ರಾಜಕೀಯ ನಾಯಕರನ್ನೂ ಕಂಗೆಡಿಸಿದೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಮತ್ತು ಮಹಾರಾಷ್ಟ್ರದ ಬಿಜೆಪಿ ವಕ್ತಾರ ಕೇಶವ್ ಉಪಾಧ್ಯ ಮಹಾ ಮಳೆಯಲ್ಲಿ ಮಂಡಿ ಉದ್ದ ನಿಂತಿರುವ ನೀರಿನಲ್ಲಿ ಜೊತೆಯಾಗಿ ಹೆಜ್ಜೆ ಹಾಕುತ್ತಿರುವ ಫೋಟೊ ಈಗ ವೈರಲ್ ಆಗಿದೆ.

ಅದರಲ್ಲೂ ಒಂದು ಕೈನಲ್ಲಿ ಬೂಟುಗಳನ್ನ ಹಿಡಿದು ಮತ್ತೊಂದು ಕೈನಲ್ಲಿ ಕೊಡೆಯನ್ನ ಹಿಡಿದು ಸಂಬೀತ್ ಪಾತ್ರ ನಡೆದು ಬರ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಶೇರ್ ಆಗ್ತಿದೆ. ದಾದರ್ ನಲ್ಲಿರುವ ಬಿಜೆಪಿ ಕಚೇರಿಯತ್ತ ಹೊರಟಿರುವ ಉಭಯ ನಾಯಕರು ಪಕ್ಷದ ಸಭೆಯಲ್ಲಿ ಭಾಗವಹಿಸೋಕೆ ತೆರಳುತ್ತಿದ್ದರು.

ಮಹಾ ಮಳೆಯಿಂದ ತತ್ತರಿಸುತ್ತಿರುವ ಮುಂಬೈ ನಾಗರಿಕರಿಗೆ ಸಹಾಯ ಹಸ್ತ ಚಾಚುವ ಸಲುವಾಗಿಯೇ ಮಹಾರಾಷ್ಟ್ರದ ಬಿಜೆಪಿ ಘಟಕ ‘ಬಿಜೆಪಿ ಫಾರ್ ಮಹಾರಾಷ್ಟ್ರ ಇನ್ ಮುಂಬೈ ಟುಡೇ’ ಎಂಬ ಅಭಿಯಾನವನ್ನ ಆರಂಭಿಸಿದೆ. ಈ ಅಭಿಯಾನದ ಬಗ್ಗೆ ನಡೆದ ಸಭೆಯಲ್ಲಿ ಭಾಗವಹಿಸೋದಕ್ಕೆ ಮತ್ತು ಮಾಧ್ಯಮಗಳ ಕಾರ್ಯಕ್ರಮದಲ್ಲಿ ಭಾಗವಹಿಸೋದಕ್ಕೆ ಉಭಯ ನಾಯಕರು ಪಕ್ಷದ ಕಚೇರಿಯತ್ತ ತೆರಳುತ್ತಿದ್ದರು.

ಈ ಫೋಟೋ ಕುರಿತು ಕಾಂಗ್ರೆಸ್ ಗೇಲಿ ಮಾಡಿದ್ದು, ಬಿಜೆಪಿ-ಶಿವಸೇನಾ ಮೈತ್ರಿಕೂಟದ ಆಡಳಿತದಿಂದಾಗಿ ಮುಂಬೈಗರಿಗೆ ಇಂದು ಈ ಪರಿಸ್ಥಿತಿ ಬಂದೊದಗಿದೆ ಎಂದು ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...