alex Certify
ಕನ್ನಡ ದುನಿಯಾ       Mobile App
       

Kannada Duniya

ನಿರುದ್ಯೋಗಿಗಳಿಗಾಗಿ ಶುರುವಾಯ್ತು ‘ಪಿಎಂ ಪಕೋಡಾ ಟ್ರೈನಿಂಗ್ ಸೆಂಟರ್’…!

ಸಂದರ್ಶನವೊಂದರಲ್ಲಿ ನಿರುದ್ಯೋಗ ಕುರಿತಂತೆ ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ‘ಪಕೋಡಾ’ ಹೇಳಿಕೆಗೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿದೆಯಲ್ಲದೇ ಕರ್ನಾಟಕದಲ್ಲಿ ಉದ್ಯೋಗಕ್ಕಾಗಿ ಯುವಜನರು ಸಂಘಟನೆಯ ಕಾರ್ಯಕರ್ತರು ಬೆಂಗಳೂರಿನ ಬಿಜೆಪಿ ಕಛೇರಿ ಎದುರು ಪಕೋಡಾ ಮಾರಾಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದರು.

ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ನಿರುದ್ಯೋಗಿ ಯುವಕರಿಗಾಗಿ ‘ಪಿಎಂ ಪಕೋಡಾ ಟ್ರೈನಿಂಗ್ ಸೆಂಟರ್’ ನ್ನು ಆರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ವಿಭಿನ್ನವಾಗಿ ವಿರೋಧ ವ್ಯಕ್ತಪಡಿಸಿದೆ.

ಭಾನುವಾರದಂದು ಬರೇಲಿಯಲ್ಲಿ ಆರಂಭವಾಗಿರುವ ಪಕೋಡಾ ಟ್ರೈನಿಂಗ್ ಸೆಂಟರ್ ನಲ್ಲಿ ನಾಲ್ಕು ಬಗೆಯ ಪಕೋಡಾ ತಯಾರಿ ವಿಧಾನವನ್ನು ಕಲಿಸಿಕೊಡಲಿದ್ದು, ಬಿ.ಟೆಕ್, ಎಂ ಟೆಕ್ ಪದವೀಧರರಿಗೆ ಮೋದಿ ಪಕೋಡಾ, ಎಂಬಿಎ ಮತ್ತು ಪಿಎಚ್ಡಿ ಮಾಡಿದವರಿಗೆ ಶಾ ಪಕೋಡಾ, ಎಂಕಾಂ ಪದವೀಧರರಿಗೆ ಜೇಟ್ಲಿ ಪಕೋಡಾ ಹಾಗೂ ಪದವೀಧರರು ಮತ್ತು ನಿರುದ್ಯೋಗಿಗಳಿಗೆ ಯೋಗಿ ಪಕೋಡಾ ಕುರಿತು ತರಬೇತಿ ನೀಡಲಾಗುತ್ತದೆ.

ಈ ಕುರಿತು ಮಾತನಾಡಿರುವ ಸಮಾಜವಾದಿ ಪಕ್ಷದ ವಕ್ತಾರ ಅತಾವುರ್ ರೆಹಮಾನ್, ಅಧಿಕಾರಕ್ಕೆ ಬರುವ ಮುನ್ನ ನಿರುದ್ಯೋಗಿಗಳಿಗಾಗಿ ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯವರು ಅದರಲ್ಲಿ ವಿಫಲರಾಗಿದ್ದಾರೆ. ಅಲ್ಲದೇ ಕಳೆದ ನಾಲ್ಕು ವರ್ಷಗಳಿಂದ 8 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಪಕೋಡಾ ಮಾರಾಟ ಮಾಡುವುದೂ ಒಂದು ಉದ್ಯೋಗ ಎಂದು ಪಿಎಂ ಹೇಳುತ್ತಿದ್ದಾರೆ. ಪ್ರಧಾನಿಯವರ ಪಕೋಡಾ ಮಾರಾಟ ಉದ್ಯೋಗದ ಹೇಳಿಕೆಗೆ ಇನ್ನಷ್ಟು ಬಲ ತುಂಬಲು ತರಬೇತಿ ಕೇಂದ್ರ ಆರಂಭಿಸಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಮತ್ತಷ್ಟು ಪಕೋಡಾ ಟ್ರೈನಿಂಗ್ ಸೆಂಟರ್ ಗಳನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ. ಸಮಾಜವಾದಿ ಪಕ್ಷದ ಕಾರ್ಯಕ್ಕೆ ಉತ್ತರ ಪ್ರದೇಶ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಮೂಲಕ ನಿರುದ್ಯೋಗಿಗಳನ್ನು ಸಮಾಜವಾದಿ ಪಾರ್ಟಿ ಅಣಕ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...