alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕರು ಬೈದಿದ್ದಕ್ಕೆ ಕಟ್ಟಡದ ಮೇಲಿಂದ ಸಾವಿನ ಜಂಪ್

ತಮಿಳುನಾಡಿನ ಸೇಲಂನಲ್ಲಿ ಇಬ್ಬರು ಶಾಲಾ ಬಾಲಕಿಯರು ಕೈಕೈ ಹಿಡಿದು ಹಾಸ್ಟೆಲ್ ಕಟ್ಟಡದಿಂದ ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರಲ್ಲಿ ಒಬ್ಬ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. 13 ವರ್ಷದ ಬಾಲಕಿ ಜಯರಾಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇನ್ನೋರ್ವ ವಿದ್ಯಾರ್ಥಿನಿ ಕವಿಶ್ರೀ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜಯರಾಣಿ ಹಾಗೂ ಕವಿಶ್ರೀ ಆತ್ಮೀಯ ಸ್ನೇಹಿತೆಯರು, ಒಂದೇ ಶಾಲೆಯಲ್ಲಿ ಓದುತ್ತಿದ್ರು. ಕ್ಲಾಸ್ ಬಂಕ್ ಮಾಡದಂತೆ ಇಬ್ಬರಿಗೂ ಶಿಕ್ಷಕರು ಬೈದಿದ್ದಾರೆ. ತರಗತಿ ತಪ್ಪಿಸಿದ್ರೆ ಪೋಷಕರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಇದರಿಂದ ಹೆದರಿದ ಇಬ್ಬರೂ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದಾರೆ.

ಶುಕ್ರವಾರ ಸಂಜೆ ಶಾಲೆ ಬಿಟ್ಟವರೇ ನೇರವಾಗಿ ಮನೆಗೆ ಹೋಗಿಲ್ಲ. ಸ್ಕೂಲ್ ಬ್ಯಾಗ್ ಅನ್ನು ಶಾಲೆಯಲ್ಲೇ ಬಿಟ್ಟು ಹಾಸ್ಟೆಲ್ ಗೆ ಹೋಗಿದ್ದಾರೆ. ಅಲ್ಲಿ ಕಟ್ಟಡದ ಮೇಲಿಂದ ಕೆಳಕ್ಕೆ ಹಾರಿದ್ದಾರೆ. ರಾತ್ರಿಯಾದ್ರೂ ಮಕ್ಕಳು ಮನೆಗೆ ಬಾರದನ್ನು ನೋಡಿ ಪೊಲೀಸರು ಎಲ್ಲಾ ಕಡೆ ಹುಡುಕಾಟ ನಡೆಸಿದ್ರು, ಆಗ ಆತ್ಮಹತ್ಯೆಗೆ ಯತ್ನಿಸಿರೋದು ಬೆಳಕಿಗೆ ಬಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...