alex Certify
ಕನ್ನಡ ದುನಿಯಾ       Mobile App
       

Kannada Duniya

ಲಿಂಗ ಪರಿವರ್ತನೆ ಮಾಡಿಸಿಕೊಂಡ ಸೇನೆ ಸಿಬ್ಬಂದಿಗೆ ಶಾಕ್!

ಲಿಂಗ ಬದಲಾವಣೆಗೆ ಒಳಗಾಗಿದ್ದ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ. ರಜೆಯಲ್ಲಿದ್ದ ಮನೀಶ್ ಕುಮಾರ್ ಗಿರಿ ಎಂಬಾತ ನೌಕಾಸೇನೆಯ ನಿಯಮಗಳನ್ನು ಮೀರಿ ಲಿಂಗಪರಿವರ್ತನೆ ಮಾಡಿಕೊಂಡಿದ್ದಾನೆ. ಹಾಗಾಗಿ ಆತನನ್ನು ಕರ್ತವ್ಯದಿಂದ ವಜಾ ಮಾಡುತ್ತಿರುವುದಾಗಿ ಭಾರತೀಯ ನೌಕಾಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.

ಮನೀಶ್ ಕುಮಾರ್ ಗಿರಿ ಕೆಲ ತಿಂಗಳುಗಳ ಹಿಂದೆ ಲಿಂಗಪರಿವರ್ತನೆಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಕಳೆದ ಆಗಸ್ಟ್ ನಲ್ಲೇ ಆತನನ್ನು ಸೇವೆಯಿಂದ ಮುಕ್ತಗೊಳಿಸಲು ನಿರ್ಧರಿಸಲಾಗಿತ್ತು. ಆದ್ರೆ ತನಗೆ ಅನ್ಯಾಯವಾಗಿದೆ ಅಂತಾ ಮನೀಶ್ ಆರೋಪಿಸಿದ್ದಾನೆ. ಈ ಪ್ರಕರಣದ ಬಗ್ಗೆ ರಕ್ಷಣಾ ಇಲಾಖೆ ತನಿಖೆ ಕೂಡ ನಡೆಸುತ್ತಿದೆ.

ಭಾರತೀಯ ನೌಕಾಸೇನೆಯ ನಿಯಮದ ಪ್ರಕಾರ ಈ ರೀತಿ ಲಿಂಗ ಪರಿವರ್ತನೆ ಮಾಡಿಕೊಂಡು ಸೇವೆ ಸಲ್ಲಿಸಲು ಅವಕಾಶವಿಲ್ಲ. ಈ ಹಿಂದೆ ಪುರುಷ ಸಿಬ್ಬಂದಿಯಾಗಿದ್ದ ಮನೀಶ್ ಗಿರಿ ಈಗ ಮಹಿಳೆಯಾಗಿ ಬದಲಾಗಿದ್ದಾನೆ. ನೌಕಾಸೇನೆಯ ನಿಯಮ ಇದಕ್ಕೆ ಸಮ್ಮತಿಸುವುದಿಲ್ಲ ಅಂತಾ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...