alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಹಳೆ ನೋಟು ಸ್ವೀಕರಿಸಲ್ಲ ಸಾಯಿಬಾಬಾ

sai-baba

ನವೆಂಬರ್ 8ರ ಮಧ್ಯರಾತ್ರಿ ನಂತ್ರ ಕಪ್ಪುಹಣ ಹೊಂದಿದ್ದ ಜನರಿಗೆ ದೇವರ ಮೇಲೆ ಪ್ರೀತಿ ಜಾಸ್ತಿಯಾಗಿದೆ. ಬ್ಲ್ಯಾಕ್ ಮನಿಯನ್ನು ವೈಟ್ ಮಾಡಲು ಏನೆಲ್ಲ ಕಸರತ್ತು ಮಾಡ್ತಿದ್ದಾರೆ. ಜೊತೆಗೆ ದೇವರ ಹುಂಡಿಗೆ ನೋಟಿನ ಕಂತೆ ತಂದು ಹಾಕ್ತಿದ್ದಾರೆ. ಆದ್ರೀಗ ಇದಕ್ಕೂ ಕಡಿವಾಣ ಬಿದ್ದಿದೆ.

ಇನ್ಮುಂದೆ 500 ಹಾಗೂ 1000 ಮುಖ ಬೆಲೆಯ ಹಳೆ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂದು ಶಿರಡಿ ಸಾಯಿಬಾಬಾ ಟ್ರಸ್ಟ್ ಘೋಷಣೆ ಮಾಡಿದೆ. ದೇಣಿಗೆ ರೂಪದಲ್ಲಿ ಹಣವನ್ನು ಪಡೆಯೋದಿಲ್ಲ ಎಂದಿದೆ. ಸರ್ಕಾರ ನೋಟು ನಿಷೇಧದ ಘೋಷಣೆ ಮಾಡಿದ ನಂತರವೂ ಎಲ್ಲ ರೀತಿಯ ನೋಟುಗಳನ್ನು ದೇಣಿಗೆ ರೂಪದಲ್ಲಿ ಪಡೆಯಲಾಗುತ್ತಿತ್ತು. ಉಳಿದ ಕೆಲಸಕ್ಕೆ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಬಳಸಲಾಗ್ತಾ ಇದೆ. ಆದ್ರೀಗ ಹಳೆ ನೋಟುಗಳನ್ನು ಸ್ವೀಕಾರ ಮಾಡುವುದಿಲ್ಲ ಎಂದು ಸಂಸ್ಥೆಯ ಟ್ರಸ್ಟಿ ಬಾಬಾ ಸಾಹೇಬ್ ಘೋರ್ಪಡೆ ತಿಳಿಸಿದ್ದಾರೆ.

ದೇವಸ್ಥಾನದ ಹುಂಡಿಯಲ್ಲಿ ಎಷ್ಟು ಹಣವಿದೆಯೋ ಅದನ್ನು ಬ್ಯಾಂಕ್ ಗೆ ಜಮಾ ಮಾಡುತ್ತೇವೆ. ಇಂದಿನಿಂದ ಹಳೆ ನೋಟುಗಳನ್ನು ಸ್ವೀಕರಿಸದಿರಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದವರು ಸ್ಪಷ್ಟಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...