alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಕ್ಷೇತ್ರದಲ್ಲಿ ಮುನಿಸಿಕೊಂಡ ಸಾಧುಗಳು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಸಭಾ ಕ್ಷೇತ್ರ ಬನಾರಸ್ ಸಾಧುಗಳು ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದಾರೆ. ಬನಾರಸ್ ನಲ್ಲಿ ಪ್ರತಿಭಟನೆ ನಡೆಸಲು ಸಾಧುಗಳು ಸಿದ್ಧರಾಗ್ತಿದ್ದಾರೆ. ವಾರಣಾಸಿಯಲ್ಲಿ ನಿರ್ಮಾಣವಾಗಲಿರುವ ವಿಶ್ವನಾಥ್ ಕಾರಿಡಾರ್ ಸಾಧುಗಳ ಮುನಿಸಿಗೆ ಕಾರಣವಾಗಿದೆ.

ವಿಶ್ವನಾಥ್ ಕಾರಿಡಾರ್ ನಿರ್ಮಾಣವಾದ್ರೆ ಸುಮಾರು 20ಕ್ಕೂ ಹೆಚ್ಚು ಸಣ್ಣ ಸಣ್ಣ ಮಂದಿರಗಳು ನೆಲಸಮವಾಗಲಿವೆ. ಮೋದಿ ಸರ್ಕಾರ, ಪೌರಾಣಿಕ ನಗರದ ವಾರಣಾಸಿಯ ಸೌಂದರ್ಯವನ್ನು ಆಧುನಿಕತೆ ಹೆಸರಿನಲ್ಲಿ ಹಾಳು ಮಾಡ್ತಿದೆ ಎಂಬುದು ಸಾಧುಗಳ ದೂರಾಗಿದೆ, ಈಗಾಗಲೇ ಸಾಧುಗಳು ಒಂದು ಸುತ್ತಿನ ಪ್ರತಿಭಟನೆ ನಡೆಸಿದ್ದಾರೆ.

ಮೋದಿ ಸರ್ಕಾರ ಈಗ್ಲೂ ಎಚ್ಚೆತ್ತುಕೊಳ್ಳದೆ ಹೋದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ಸಾಧುಗಳು ಎಚ್ಚರಿಕೆ ನೀಡಿದ್ದಾರೆ. ದೇವಸ್ಥಾನಗಳ ನೆಲಸಮವಾಗದಂತೆ ನೋಡಿಕೊಳ್ಳಲು ಸಾಧುಗಳ ಕಮಿಟಿ ರಚನೆಯಾಗಿದೆ. ವಿಶ್ವನಾಥ್ ಕಾರಿಡಾರ್ ಮೋದಿ ಕನಸಾಗಿದೆ. ಈ ಯೋಜನೆ ಮೂಲಕ ವಾರಾಣಸಿಗೆ ಆಧುನಿಕತೆ ಲುಕ್ ನೀಡುವುದು ಮೋದಿ ಗುರಿಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...