alex Certify
ಕನ್ನಡ ದುನಿಯಾ       Mobile App
       

Kannada Duniya

ಚೈತ್ರ ನವರಾತ್ರಿ ಆರಂಭ: 9 ದಿನಗಳ ಕಾಲ ವೃತ ಮಾಡ್ತಾರೆ ಮೋದಿ, ಯೋಗಿ

2017_3image_16_28_073347605modi-yogi-ll

ಇಂದಿನಿಂದ ಚೈತ್ರ ನವರಾತ್ರಿ ಶುರುವಾಗಿದೆ. ವರ್ಷದಲ್ಲಿ ನಾಲ್ಕು ಬಾರಿ ನವರಾತ್ರಿ ಆಚರಿಸಲಾಗುತ್ತದೆ. ಇದಲ್ಲದೆ ಎರಡು ಬಾರಿ ಗುಪ್ತ ನವರಾತ್ರಿಯನ್ನು ಆಚರಿಸಲಾಗುತ್ತದೆ. ದೇವಿ ದುರ್ಗೆಯ ಆರಾಧನೆ ಮಾಡಿ ಆಕೆಯ ಆಶೀರ್ವಾದ ಪಡೆಯಲು ಇದು ಶುಭ ಸಮಯ. ನವರಾತ್ರಿಯಲ್ಲಿ 9 ದಿನಗಳ ಕಾಲ ದುರ್ಗೆಯ ಪೂಜೆ ನಡೆಯುತ್ತದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ವರ್ಷದಲ್ಲಿ ಬರುವ ಎರಡು ನವರಾತ್ರಿಯಲ್ಲಿ ವೃತ ಮಾಡ್ತಾರೆ. ಅಂದ್ರೆ ವರ್ಷದಲ್ಲಿ 18 ದಿನಗಳ ಕಾಲ ಮೋದಿ ತಾಯಿ ದುರ್ಗೆಯ ಆರಾಧನೆ ಮಾಡ್ತಾರೆ. ಶರನ್ನವರಾತ್ರಿ ಹಾಗೂ ಚೈತ್ರ ನವರಾತ್ರಿಯಲ್ಲಿ ಮೋದಿ ವೃತ ಕೈಗೊಳ್ಳುತ್ತಾರೆ.

ಪ್ರಧಾನ ಮಂತ್ರಿ ಮೋದಿ ವೃತ :

ರಾತ್ರಿ ಮಲಗಲು ಎಷ್ಟೇ ಲೇಟ್ ಆಗ್ಲಿ ಬೆಳಿಗ್ಗೆ ನಾಲ್ಕು ಗಂಟೆಗೆ ಏಳ್ತಾರಂತೆ ಮೋದಿ.

ಸುಮಾರು 40 ವರ್ಷಗಳಿಂದ ಮೋದಿ ನವರಾತ್ರಿ ವೃತ ಮಾಡ್ತಿದ್ದಾರೆ.

ನವರಾತ್ರಿಯ 9 ದಿನ ಮೋದಿ ಅನ್ನ-ಆಹಾರವನ್ನು ಸೇವನೆ ಮಾಡುವುದಿಲ್ಲ. ಕೇವಲ ಹಣ್ಣು ಹಾಗೂ ನಿಂಬು ನೀರು ಅಥವಾ ನೀರನ್ನು ಹೆಚ್ಚಿಗೆ ಸೇವನೆ ಮಾಡ್ತಾರೆ.

9 ದಿನಗಳ ಕಾಲ ಮೋದಿ ದುರ್ಗಾ ಸಪ್ತಶತಿ ಸ್ತೋತ್ರವನ್ನು ಓದುತ್ತಾರೆ.

ಉಪವಾಸದ ಸಮಯದಲ್ಲಿಯೂ ಮೋದಿ ಅಶಕ್ತರಾಗುವುದಿಲ್ಲ. ಎಂದಿನಂತೆ ತಮ್ಮ ಕಾರ್ಯಗಳನ್ನು ಮಾಡ್ತಾರೆ. ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಂಡಿದ್ದೂ ಇದೆ. ಬೆಳಿಗ್ಗೆ 5 ಗಂಟೆ ಬದಲು 4 ಗಂಟೆಗೆ ಏಳುವ ಮೋದಿ ಯೋಗ ಮಾಡಿ, ನಂತರ ದೇವಿಯ ಆರಾಧನೆ ಮಾಡಿ ತಮ್ಮ ದಿನನಿತ್ಯದ ಕೆಲಸದಲ್ಲಿ ತೊಡಗಿಕೊಳ್ತಾರೆ.

2014 ರಲ್ಲಿ ಮೊದಲ ಬಾರಿ ಮೋದಿ ಅಮೆರಿಕಾಕ್ಕೆ ಹೋದಾಗ ಕೂಡ ನವರಾತ್ರಿ ಹಿನ್ನೆಲೆಯಲ್ಲಿ ವೃತ ಕೈಗೊಂಡಿದ್ದರು. ಆಗ ಕೂಡ ಮೋದಿ ಹಣ್ಣು ಹಾಗೂ ನಿಂಬು ನೀರು ಸೇವನೆ ಮಾಡಿದ್ದರು. ಮೋದಿ ಎನರ್ಜಿ ನೋಡಿ ಅಂದಿನ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಆಶ್ಚರ್ಯ ವ್ಯಕ್ತಪಡಿಸಿದ್ದರು.

ಇನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೂಡ ವೃತ ಮಾಡ್ತಾರೆ. ಅನ್ನ-ಆಹಾರ ತ್ಯಜಿಸುವ ಅವರು ಹಣ್ಣು ಹಾಗೂ ನೀರು ಮಾತ್ರ ಸೇವಿಸ್ತಾರೆ. 9 ದಿನಗಳವರೆಗೆ 21 ಬ್ರಾಹ್ಮಣದ ಜೊತೆ ಸಪ್ತಶತಿ ಸ್ತೋತ್ರ ಪಠಿಸ್ತಾರೆ. ಸನ್ಯಾಸಿಯಾಗಿರುವ ಯೋಗಿ ಕಠಿಣ ವೃತ ಪಾಲಿಸ್ತಾರೆ. ಶರನ್ನವರಾತ್ರಿಯಲ್ಲಿ ಯೋಗಿ 9 ದಿನ ಯಾರ ಜೊತೆಯೂ ಮಾತನಾಡದೆ ದೇವಿಯ ಆರಾಧನೆ ಮಾಡ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...