alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳನಾಗಿ ಬದಲಾಗಿದ್ದ ವಜಾಗೊಂಡ ಪೊಲೀಸ್ ಪೇದೆ

ಮಣಿಪುರದ ವಜಾಗೊಂಡ ಪೊಲೀಸ್ ಪೇದೆಯೊಬ್ಬ ಕಳ್ಳನಾಗಿ ಬದಲಾಗಿದ್ದು, ಐಶಾರಾಮಿ ಕಾರುಗಳ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದಾಗ ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಈ ಕಾರುಗಳ್ಳರ ತಂಡ, ಬಿಎಂಡಬ್ಲ್ಯೂ, ಶವರ್ಲೆಟ್ ಕ್ರೂಜ್, ಟೊಯೋಟಾ ಫಾರ್ಚುನರ್, ಸ್ಕೋಡಾ ಸೇರಿದಂತೆ ಹಲವು ಐಶಾರಾಮಿ ಕಾರುಗಳನ್ನು ಕಳ್ಳತನ ಮಾಡಿ ಅದನ್ನು ಇಂಫಾಲ್ ಗೆ ಕೊಂಡೊಯ್ದು ನಕಲಿ ದಾಖಲೆಗಳೊಂದಿಗೆ ಅಲ್ಲಿ ಅರ್ಧ ಬೆಲೆಗೆ ಮಾರುತ್ತಿದ್ದರು.

ಆಂಟಿ ಅಟೋ ಥೆಫ್ಟ್ ಸ್ವಾಡ್ ತಂಡ ಈ ಜಾಲವನ್ನು ಬೇಧಿಸಿದ್ದು, ಮೊಹಮ್ಮದ್ ಫಕ್ರುದ್ದೀನ್, ಸೊರೊಕೈಬಮ್ ಸಿಂಗ್, ಅಸ್ಕರ್ ಅಹ್ಮದ್, ಅಬ್ದುಲ್ ಖಾನ್ ಎಂಬುವವರನ್ನು ಬಂಧಿಸಲಾಗಿದೆ. 8 ನಾಡ ಪಿಸ್ತೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ 16 ಐಶಾರಾಮಿ ಕಾರುಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...