alex Certify
ಕನ್ನಡ ದುನಿಯಾ       Mobile App
       

Kannada Duniya

‘ಮನ್ ಕಿ ಬಾತ್’ ಮೋದಿಗೆ ಸಚಿನ್, ವಿ. ಆನಂದ್ ಸಾಥ್

mann-ki-baat_story_647_022816081133

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಕಾಶವಾಣಿಯಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೋದಿ ಅವರ 17ನೇ ‘ಮನ್ ಕಿ ಬಾತ್’ ಕಾರ್ಯಕ್ರಮ ಈ ಬಾರಿ ವಿಶೇಷವಾಗಿತ್ತು. ಅವರಿಗೆ ಕ್ರಿಕೆಟ್ ಹಾಗೂ ಚೆಸ್ ಆಟದ ದಿಗ್ಗಜರು ಸಾಥ್ ನೀಡಿದರು.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾಗೂ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ನರೇಂದ್ರ ಮೋದಿ ಜೊತೆಗೆ ‘ಮನ್ ಕೀ ಬಾತ್’ ನಲ್ಲಿ ಪಾಲ್ಗೊಂಡಿದ್ದರು. ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಕೆಲವು ಟಿಪ್ಸ್ ಗಳನ್ನು ನೀಡಿದರು. ಸಚಿನ್ ತೆಂಡೂಲ್ಕರ್, ಪಾಸಿಟಿವ್ ಆಗಿ ಮುನ್ನಡೆಯಿರಿ. ನಿಮಗೆ ಉಜ್ವಲ ಭವಿಷ್ಯ ಇದೆ. ವಿಶ್ವಾಸದಿಂದ ಪರೀಕ್ಷೆ ಎದುರಿಸಿ. ಸರಿಯಾದ ಕ್ರಮದಲ್ಲಿ ಓದಿಕೊಳ್ಳಿ. ಪರೀಕ್ಷೆ ಸಮೀಪಿಸುತ್ತಿವೆ. ಎಲ್ಲಾ ಸಿದ್ಧತೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ವಿಶ್ವನಾಥನ್ ಆನಂದ್, ಶಾಂತಚಿತ್ತತೆ ಕಾಪಾಡಿಕೊಳ್ಳಿ, ಇದರಿಂದ ನಿಮಗೆ ಪರೀಕ್ಷೆ ಎದುರಿಸಲು ಅನುಕೂಲವಾಗುತ್ತದೆ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಗುರಿಯ ಕಡೆಗೆ ನಿಮ್ಮ ಗಮನ ಇರಲಿ ಎಂದರು. ಮೋದಿ ಅವರು ಪರೀಕ್ಷೆ ಸಮೀಪಿಸುತ್ತಿವೆ. ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದು ಹಾರೈಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...