alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿಭಟನೆಯಿಂದಾಗಿ ರದ್ದಾಯ್ತು ಸಚಿನ್ ಚೊಚ್ಚಲ ಭಾಷಣ

ಮಾಜಿ ಕ್ರಿಕೆಟರ್ ಹಾಗೂ ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಇದೇ ಮೊದಲ ಬಾರಿ ಸಂಸತ್ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಆದ್ರೆ ಸಚಿನ್ ಚೊಚ್ಚಲ ಪಂದ್ಯ ಉತ್ತಮವಾಗಿರಲಿಲ್ಲ. ಪ್ರತಿಪಕ್ಷಗಳ ಗಲಾಟೆಯಿಂದಾಗಿ ಸಚಿನ್ ತಮ್ಮ ಅಭಿಪ್ರಾಯವನ್ನು ಸಂಸತ್ ಮುಂದಿಡಲು ಸಾಧ್ಯವಾಗಲಿಲ್ಲ.

2012 ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ನಂತ್ರ ಸಚಿನ್ ಇದೇ ಮೊದಲ ಬಾರಿ ಸಂಸತ್ ಉದ್ದೇಶಿಸಿ ಮಾತನಾಡುವವರಿದ್ದರು. ಭಾಷಣ ಆರಂಭಿಸಬೇಕು. ಆಗ್ಲೇ ವಿರೋಧ ಪಕ್ಷಗಳು ಗಲಾಟೆ ಶುರುಮಾಡಿದ್ವು. ವಿಪಕ್ಷಗಳು ಮನಮೋಹನ್ ಸಿಂಗ್ ವಿಚಾರಕ್ಕೆ ಪ್ರತಿಭಟನೆ ಶುರುಮಾಡಿದ್ದರಿಂದ ಸಚಿನ್ ಮಾತನಾಡಲು ಸಾಧ್ಯವಾಗಲಿಲ್ಲ. ಸಚಿನ್, ಪತ್ನಿ ಅಂಜಲಿ ಜೊತೆ ರಾಜ್ಯಸಭೆಗೆ ಬಂದಿದ್ದರು.

ರಾಜ್ಯಸಭೆಯಲ್ಲಿ ಸಚಿನ್ ಎದ್ದು ನಿಂತು ಭಾಷಣ ಶುರುಮಾಡುವ ಮೊದಲು ವಿಪಕ್ಷಗಳು ಗಲಾಟೆ ಶುರುಮಾಡಿದ್ವು. ವಿಪಕ್ಷಗಳನ್ನು ಸುಮ್ಮನಿರಿಸಲು ಸಭಾಪತಿ ವೆಂಕಯ್ಯ ನಾಯ್ಡು ಪ್ರಯತ್ನಿಸಿದ್ರು. ಸಂಸತ್ ಉದ್ದೇಶಿಸಿ ಮಾತನಾಡುತ್ತಿರುವ ವ್ಯಕ್ತಿ ಭಾರತ ರತ್ನ. ಇಡೀ ದೇಶ ನೋಡ್ತಿದೆ. ಶಾಂತವಾಗಿ ಎಂದ್ರೂ ಯಾವುದೇ ಪ್ರಯೋಜನವಾಗಲಿಲ್ಲ.

ಈ ಹಿಂದೆ ಸಚಿನ್ ರಾಜ್ಯಸಭೆ ಕಲಾಪಗಳಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ವಿಷ್ಯ ಬಹುದೊಡ್ಡ ಚರ್ಚೆಯಾಗಿತ್ತು. ಆದ್ರೆ ಕಲಾಪದಲ್ಲಿ ಪಾಲ್ಗೊಂಡು ಶಾಂತ ರೀತಿಯಿಂದ ಮಾತನಾಡಲು ಮುಂದಾದ ಕ್ರಿಕೆಟ್ ದೇವರ ಮಾತು ಕೇಳಲು ವಿಪಕ್ಷಗಳು ಅವಕಾಶ ನೀಡಲಿಲ್ಲ. ಇದು ಸಚಿನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...