alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ ರಹಿತ ಆರೋಪ ಮಾಡಿ ದಂಡ ತೆತ್ತ ಬಿಜೆಪಿ ಅಧ್ಯಕ್ಷೆ

ದೇಶದ ಬಹು ಚರ್ಚಿತ ವಿಷ್ಯಗಳಲ್ಲಿ ಶಬರಿಮಲೆ ವಿವಾದ ಕೂಡ ಒಂದು. ಶಬರಿಮಲೆ ವಿವಾದ ಕೋರ್ಟ್ ನಲ್ಲಿದೆ. ಕೆಲ ದಿನಗಳ ಹಿಂದೆ ದೇವಸ್ಥಾನದ ಬಳಿ ನಡೆದ ಗಲಾಟೆಯಲ್ಲಿ ಪೊಲೀಸ್ ಕ್ರಮ ಖಂಡಿಸಿ ಬಿಜೆಪಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಮಂಗಳವಾರ ಬಿಜೆಪಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ ಕೋರ್ಟ್ 25 ಸಾವಿರ ರೂಪಾಯಿ ದಂಡ ವಿಧಿಸಿದೆ.

ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಶೋಭಾ ಅರ್ಜಿ ಸಲ್ಲಿಸಿದ್ದರು. ಶಬರಿಮಲೈನಲ್ಲಿ ಪೊಲೀಸರು ಭಕ್ತರಿಗೆ ತೊಂದರೆ ನೀಡಿದ್ದರು ಎಂದು ಅರ್ಜಿಯಲ್ಲಿ ಆರೋಪ ಮಾಡಿದ್ದರು. ಆದ್ರೆ ಇದು ಆಧಾರ ರಹಿತವೆಂದು ಕೋರ್ಟ್ ಹೇಳಿದೆ. ಇದಕ್ಕೆ ಯಾವುದೇ ಸಾಕ್ಷಿಯಿಲ್ಲ. ಪ್ರಕರಣವನ್ನು ಇನ್ನಷ್ಟು ಜಟಿಲ ಮಾಡಲು ಈ ಅರ್ಜಿ ಸಲ್ಲಿಸಲಾಗಿದೆ. ಇದ್ರಿಂದ ಕೋರ್ಟ್ ಅಮೂಲ್ಯ ಸಮಯ ಹಾಳಾಗಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಕೋರ್ಟ್ ಸಮಯ ಹಾಳು ಮಾಡಿದ ಅಧ್ಯಕ್ಷೆಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ.

ಕೋರ್ಟ್ ಸೂಚನೆ ಬಳಿಕ ಅಧ್ಯಕ್ಷೆ ಪರ ವಕೀಲರು ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ನಂತ್ರ ದೇವಸ್ಥಾನದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ದಿನಕ್ಕೊಂದು ವಿವಾದ ನಡೆಯುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...