alex Certify
ಕನ್ನಡ ದುನಿಯಾ       Mobile App
       

Kannada Duniya

ಐಎಎಸ್ ಅಧಿಕಾರಿಯ ಪತಿಯಾಗಲಿದ್ದಾರೆ ಈ ಶಾಸಕ

k-s-sabarinathan-to-wed-dr-divya-s-iyer-iasಕೇರಳದ ಯುವ ಶಾಸಕ ಕೆ.ಎಸ್. ಶಬರಿನಾಥನ್, ಐಎಎಸ್ ಅಧಿಕಾರಿ ಡಾ. ದಿವ್ಯಾ ಅಯ್ಯರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸ್ವತಃ ಕೆ.ಎಸ್. ಶಬರಿನಾಥನ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ.

ದಿವ್ಯಾ ಅಯ್ಯರ್ ಸದ್ಯ ತಿರುವನಂತಪುರಂ ಜಿಲ್ಲೆಯಲ್ಲಿ ಉಪ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಶಬರಿನಾಥನ್ ಅರುವಿಕಾರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಶಬರಿನಾಥನ್ ಕೇರಳದ ಮಾಜಿ ವಿಧಾನಸಭಾ ಸ್ಪೀಕರ್ ಕಾರ್ತಿಕೇಯನ್ ಅವರ ಪುತ್ರರಾಗಿದ್ದು, ಎಂಬಿಎ ಪದವಿ ಪಡೆದಿದ್ದಾರೆ.

ಶಬರಿನಾಥನ್ ಹಾಗೂ ದಿವ್ಯಾ ಅಯ್ಯರ್ ನಡುವೆ ಬಹು ಹಿಂದೆಯೇ ಪ್ರೇಮಾಂಕುರವಾಗಿದ್ದು, ಈಗ ಉಭಯ ಕುಟುಂಬಗಳ ಸಮ್ಮತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹುಮುಖ ಪ್ರತಿಭೆಯ ದಿವ್ಯಾ ಅಯ್ಯರ್ ಎಂಬಿಬಿಎಸ್ ಪದವಿ ಪಡೆದಿದ್ದು, ಬಳಿಕ ಐಎಎಸ್ ನಲ್ಲಿ 28 ನೇ ರ್ಯಾಂಕ್ ಪಡೆಯುವ ಮೂಲಕ ಉಪ ಜಿಲ್ಲಾಧಿಕಾರಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...