alex Certify
ಕನ್ನಡ ದುನಿಯಾ       Mobile App
       

Kannada Duniya

ಶಬರಿಮಲೆ ವಿವಾದ: ಕೊನೆ ಕ್ಷಣದಲ್ಲಿ ಪ್ರಕರಣದಿಂದ ಹಿಂದೆ ಸರಿದು ಅಚ್ಚರಿ ಮೂಡಿಸಿದ ವಕೀಲ

ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಾಲಯಕ್ಕೆ ಪ್ರವೇಶ ನೀಡುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ, ಇದರ ಕುರಿತು ಪರ-ವಿರೋಧದ ಚರ್ಚೆಗಳು ನಡೆಯುತ್ತಿದೆಯಲ್ಲದೇ ದೇವಾಲಯ ಪ್ರವೇಶಿಸಲು ಮುಂದಾದ ಮಹಿಳೆಯರಿಗೆ ತಡೆಯೊಡ್ಡಲಾಗಿದೆ.

ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಗಿದ್ದು, ಜೊತೆಗೆ ಸುಪ್ರೀಂ ತೀರ್ಪು ಅನುಷ್ಟಾನಗೊಳ್ಳದಿರುವುದನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದೆ. ಇದರ ವಿಚಾರಣೆ ಕೆಲವೇ ಗಂಟೆಗಳಿರುವಾಗಲೇ ದೇವಸ್ವಂ ಪರ ವಕೀಲ ಆರ್ಯಾಮ ಸುಂದರಂ, ಈ ಕೇಸ್ ನಿಂದ ಹಿಂದೆ ಸರಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಈ ಮೊದಲು ಮತ್ತೊಬ್ಬ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಪ್ರಕರಣದ ಕುರಿತು ವಾದ ಮಂಡಿಸಲು ಹಿಂದೇಟು ಹಾಕಿದ್ದ ಕಾರಣ ಆರ್ಯಾಮ ಸುಂದರಂ ಅವರನ್ನು ನೇಮಿಸಲಾಗಿತ್ತು. ಈಗ ಅವರೂ ಕೂಡ ಹಿಂದೆ ಸರಿದಿದ್ದು, ವಿಚಾರಣೆಗೆ ಹಾಜರಾಗದಂತೆ ಕೆಲವರು ಅವರಿಗೆ ತಡೆಯೊಡ್ಡಿದ್ದಾರೆ ಎಂದು ದೇವಸ್ವ ಮಂಡಳಿ ಅಧ್ಯಕ್ಷ ಎ. ಪದ್ಮಕುಮಾರ್ ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...