alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಶಬರಿಮಲೆ ಅಯ್ಯಪ್ಪ ಭಕ್ತರಿಗೊಂದು ಮಾಹಿತಿ

ಕೇರಳದ ಪ್ರಖ್ಯಾತ ಹಿಂದು ಪುಣ್ಯಕ್ಷೇತ್ರ ಶಬರಿಮಲೆಗೆ Sabrimala Sree Dharma Sashtha Temple ಎಂಬ ಹೆಸರು ಮುಂದುವರಿಯಲಿದೆ. ಅಯ್ಯಪ್ಪನ ಸನ್ನಿಧಿಯ ಹೆಸರು ಬದಲಾವಣೆಗೆ ಈ ಹಿಂದಿನ ಆಡಳಿತ ಮಂಡಳಿ ಮಾಡಿದ್ದ ಪ್ರಸ್ತಾವನೆಯನ್ನು ಹಾಲಿ ಆಡಳಿತ ಮಂಡಳಿ ತಿರಸ್ಕರಿಸಿದೆ.

ಅಯ್ಯಪ್ಪ ಸ್ವಾಮಿ ದೇವಾಲಯ ಎಂದು Sabrimala Sree Dharma Sashtha Temple ಗೆ ಮರು ನಾಮಕರಣ ಮಾಡಲು 2016ರಲ್ಲಿ ತೀರ್ಮಾನಿಸಲಾಗಿತ್ತು. ಇಂದು ಸಭೆ ಸೇರಿದ ತ್ರವಾಂಕೂರ್ ದೇವಾಸ್ವಮ್ ಬೋರ್ಡ್, ಹಳೆ ಹೆಸರನ್ನೇ ಮುಂದುವರಿಸಲು ನಿರ್ಧರಿಸಿದೆ. ಅಯ್ಯಪ್ಪನ ಸನ್ನಿಧಿ ಲಕ್ಷಾಂತರ ಭಕ್ತರನ್ನು ಸೆಳೆಯುವ ತಾಣವಾಗಿರುವುದರಿಂದ ಹೆಸರು ಬದಲಾವಣೆ ಬೇಡವೆಂದು ಅಭಿಪ್ರಾಯಪಟ್ಟಿದೆ.

ಇನ್ನೊಂದೆಡೆ ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ನೀಡಬೇಕು ಅನ್ನೋ ಒತ್ತಾಯ ಕೇಳಿ ಬರುತ್ತಲೇ ಇದೆ. ಈ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಆದ್ರೆ ದೇವಸ್ಥಾನ ಆಡಳಿತ ಮಂಡಳಿ ಮಹಿಳೆಯರ ಪ್ರವೇಶವನ್ನು ವಿರೋಧಿಸುತ್ತಲೇ ಬಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...