alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ತೆ- ಸೊಸೆ ಹೊಡೆತಕ್ಕೆ ತತ್ತರಿಸಿದ ದರೋಡೆಕೋರರು

robbery-1

ಕೋಲ್ಕತ್ತಾ: ಕೆಲ ದಿನಗಳ ಹಿಂದೆ ಸೊಸೆಯೊಬ್ಬಳು ತನ್ನ ಅಸಹಾಯಕ ಅತ್ತೆಗೆ ಕ್ರೂರವಾಗಿ ಹಿಂಸೆ ನೀಡುತ್ತಿರುವ ವಿಡಿಯೋವನ್ನು ‘ಕನ್ನಡ ದುನಿಯಾ’ ದಲ್ಲಿ ನೋಡಿದ್ದೀರಿ. ಆದರೆ ಈ ಪ್ರಕರಣದಲ್ಲಿ ದರೋಡೆಕೋರರು ತನ್ನ ಅತ್ತೆಯನ್ನು ಹತ್ಯೆ ಮಾಡಲು ಮುಂದಾದ ವೇಳೆ ಸೊಸೆಯೊಬ್ಬಳು ವೀರಾವೇಶದಿಂದ ಕಾದಾಡಿ ಅವರನ್ನು ಬಚಾವ್ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕೋಲ್ಕತ್ತಾದ ಉದ್ಯಮಿ ಸಜ್ಜನ್ ಅಗರ್ವಾಲ್ ಎಂಬವರ ಮನೆಗೆ ಶುಕ್ರವಾರ ಬೆಳಿಗ್ಗೆ ಶಸ್ತ್ರಸಜ್ಜಿತ ದರೋಡೆಕೋರರು ಬಂದಿದ್ದಾರೆ. ಬೆಲಿಯಾಘಾಟ್ ಬಳಿಯ ಈ ಫ್ಲಾಟ್ ನಲ್ಲಿ ಆಗ ಸಜ್ಜನ್ ಅಗರ್ವಾಲ್ ಅವರ ತಾಯಿ 69 ವರ್ಷದ ಸಂಧ್ಯಾ ಅಗರ್ವಾಲ್ ಹಾಗೂ ಸಜ್ಜನ್ ಅವರ ಪತ್ನಿ 34 ವರ್ಷದ ಶಾಂತಿ ಅಗರ್ವಾಲ್ ಮಾತ್ರ ಇದ್ದರು.

ದರೋಡೆಕೋರರು ಮೊದಲಿಗೆ ಬೆಲ್ ಮಾಡಿದ್ದು, ಕೆಲಸದವರು ಬಂದಿದ್ದಾರೆಂದು ಭಾವಿಸಿದ ಸಂಧ್ಯಾ ಅಗರ್ವಾಲ್ ಬಾಗಿಲು ತೆರೆದಿದ್ದಾರೆ. ಏಕಾಏಕಿ ಒಳ ನುಗ್ಗಿದ ನಾಲ್ವರ ತಂಡ ಸಂಧ್ಯಾ ಅಗರ್ವಾಲ್ ಅವರನ್ನು ತಳ್ಳಿ ಬೀಳಿಸಿದ್ದಲ್ಲದೇ ಕತ್ತು ಹಿಸುಕಲು ಮುಂದಾಗಿದೆ. ಅತ್ತೆ ಮೇಲೆ ದರೋಡೆಕೋರರ ತಂಡ ದಾಳಿ ಮಾಡಿದ್ದನ್ನು ನೋಡುತ್ತಲೇ ಶಾಂತಿ ಅಗರ್ವಾಲ್ ಅವರುಗಳ ಮೇಲೆ ಮುಗಿ ಬಿದ್ದಿದ್ದಾರೆ.

ಇದನ್ನು ಕಂಡ ಸಂಧ್ಯಾ ಅಗರ್ವಾಲ್ ಕೂಡಾ ಪ್ರತಿರೋಧ ಒಡ್ಡಿದ್ದಾರೆ. ಜೊತೆಗೆ ಸಹಾಯಕ್ಕಾಗಿ ಇಬ್ಬರೂ ಜೋರಾಗಿ ಕೂಗಲಾರಂಭಿಸಿದ್ದಾರೆ. ಈ ಮನೆಯಲ್ಲಿ ಹಗಲು ಹೊತ್ತು ಇಬ್ಬರೇ ಇರುತ್ತಾರೆಂಬುದನ್ನು ಅರಿತೇ ದರೋಡೆಗೆ ಬಂದಿದ್ದ ತಂಡ, ಮಹಿಳೆಯರ ಹೊಡೆತಕ್ಕೆ ತತ್ತರಿಸಿದೆ. ಜೊತೆಗೆ ಮಹಿಳೆಯರ ಕಿರುಚಾಟ ಕೇಳಿ ಅಪಾರ್ಟ್ಮೆಂಟಿನ ಇತರೆ ನಿವಾಸಿಗಳು ಆಗಮಿಸುತ್ತಿರುವುದನ್ನು ಕಂಡು ತಪ್ಪಿಸಿಕೊಂಡು ಹೋಗಲು ಮುಂದಾಗಿದೆ. ಈ ಪ್ರಯತ್ನದಲ್ಲಿ ಇಬ್ಬರು ಸಫಲರಾಗಿದ್ದರೆ ಮತ್ತಿಬ್ಬರು ಸಿಕ್ಕಿ ಬಿದ್ದು ಇದೀಗ ಕಂಬಿ ಎಣಿಸುತ್ತಿದ್ದಾರೆ. ಮಹಿಳೆಯರ ಸಮಯೋಚಿತ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...