alex Certify
ಕನ್ನಡ ದುನಿಯಾ       Mobile App
       

Kannada Duniya

ರಯಾನ್ ಸ್ಕೂಲ್ ಪ್ರಕರಣ: ಪ್ರದ್ದುಮನ್ ತಂದೆ ಅರ್ಜಿ ಸ್ವೀಕರಿಸಿದ ಸುಪ್ರೀಂ

ಹರ್ಯಾಣ ಪೊಲೀಸರು ಗುರ್ಗಾಂವ್ ನ ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿ ಪ್ರದ್ದುಮನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಇಬ್ಬರು ನಿರ್ವಹಣಾಧಿಕಾರಿಗಳನ್ನು ಬಂಧಿಸಿದ್ದಾರೆ. ರಯಾನ್ ಶಾಲೆಯ ಪ್ರಾದೇಶಿಕ ವ್ಯವಸ್ಥಾಪಕ ಹಾಗೂ ಹೆಚ್ ಆರ್ ಹೆಡ್ ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಈ ಮಧ್ಯೆ ಪ್ರದ್ದುಮನ್ ತಂದೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಹರ್ಯಾಣ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ. ಸಿಬಿಐ ಹಾಗೂ ಸಿ ಬಿ ಎಸ್ ಇ ಗೂ ನೊಟೀಸ್ ನೀಡಿರುವ ಸುಪ್ರೀಂ ಇದು ಈ ಒಬ್ಬ ಮಗುವಿನ ವಿಷ್ಯವಲ್ಲ. ದೇಶದ ಎಲ್ಲ ಮಕ್ಕಳ ವಿಷ್ಯ ಎಂದಿದೆ. ಪ್ರದ್ದುಮನ್ ತಂದೆ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಹರ್ಯಾಣ, ಕೇಂದ್ರ ಸರ್ಕಾರ ಹಾಗೂ ಸಿಬಿಐಗೆ ಸುಪ್ರೀಂ ಪ್ರಶ್ನೆಯಿಟ್ಟಿದೆ. ಯಾಕೆ ಪ್ರಕರಣವನ್ನು ಸಿಬಿಐಗೆ ನೀಡಬಾರದೆಂದು ಪ್ರಶ್ನಿಸಿದೆ.

ಸುಪ್ರೀಂ ಕೋರ್ಟ್ ಮೂರು ವಾರಗಳ ಗಡುವು ನೀಡಿದೆ. ಸಿಬಿಐ ತನಿಖೆ ನಡೆದು ಕೊಲೆಗಡುಕ ಯಾರೆಂಬ ಸತ್ಯ ಹೊರ ಬರಬೇಕೆಂಬುದು ನಮ್ಮ ಬೇಡಿಕೆಯಾಗಿತ್ತು. ಕೋರ್ಟ್ ಹಾಗೂ ಸರ್ಕಾರದ ಮೇಲೆ ಸಂಪೂರ್ಣ ಭರವಸೆಯಿದೆ ಎಂದು ಪ್ರದ್ದುಮನ್ ತಂದೆ ಹೇಳಿದ್ದಾರೆ.

ಸರ್ಕಾರ ರಚಿಸಿರುವ ವಿಚಾರಣಾ ಆಯೋಗದ ವರದಿಯಲ್ಲಿ ಶಾಲೆಯಲ್ಲಿ ಅನೇಕ ನ್ಯೂನತೆಗಳಿರುವುದು ಕಂಡು ಬಂದಿದೆ. ಶಾಲೆಯಲ್ಲಿರುವ ಸಿಸಿ ಟಿವಿ ಕ್ಯಾಮರಾ ಹಾಳಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಗತ್ಯ ಬಿದ್ದರೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದಾಗಿ ಹರ್ಯಾಣ ಸಿಎಂ ಭರವಸೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...